ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ಮಾತುಕತೆಯಲ್ಲಿ ಭಯೋತ್ಪಾದನೆ ಪ್ರಮುಖವಾದುದೇ ಹೊರತು ಕಾಶ್ಮೀರ ವಿಷಯ ಪ್ರಮುಖವಾದುದುಲ್ಲ, ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರು ಪ್ರತ್ಯೇಕತಾವಾದಿಗಳನ್ನು ಭೇಟಿಯಾಗಬಾರದು, ಆಗ ಮಾತ್ರ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ನಡೆಯಲು ಸಾಧ್ಯ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಭಾರತ ಮೂರನೇ ಪಾರ್ಟಿಯನ್ನು ಭಾರತ-ಪಾಕ್ ಮಾತುಕತೆಯಲ್ಲಿ ಭಾಗಿಯಾಗಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಯಲ್ಲಿ ಉಭಯ ದೇಶಗಳು ಎದುರಿಸುತ್ತಿರುವ ಭಯೋತ್ಪಾದನೆ ವಿಷಯ ಪ್ರಮುಖ ಅಜೆಂಡಾವಾಗಿರ ಬೇಕು ಎಂದಿದ್ದಾರೆ.
ಪ್ರತ್ಯೇಕತಾವಾದಿಗಳೊಂದಿಗಿನ ಭೇಟಿ ರದ್ದು, ಕಾಶ್ಮೀರದ ಪ್ರಸ್ತಾಪವಿಲ್ಲದೇ ಇರುವುದು ಈ ಎರಡು ವಿಷಯದ ಬಗ್ಗೆ ಪಾಕ್ ಭರವಸೆಗಳನ್ನು ನೀಡಿದರೆ ಮಾತ್ರ ಮಾತುಕತೆ ನಡೆಯಲಿದೆ. ಇಂದು ರಾತ್ರಿಯವರೆಗೆ ಪಾಕ್ಗೆ ಸಮಯಾವಕಾಶ ಇದೆ ಎಂದು ಅವರು ಹೇಳಿದ್ದಾರೆ.
ಸತ್ರಾಝ್ ಅಜೀಜ್ ಮತ್ತು ಭಾರತದ ಅಜಿತ್ ದೋವಲ್ ಅವರ ನಡುವೆ ಭಾನುವಾರ ಮತ್ತು ಸೋಮವಾರ ಮಾತುಕತೆ ನಿಗಧಿಯಾಗಿದೆ. ಆದರೆ ಪಾಕ್ ಪ್ರತ್ಯೇಕತವಾದಿಗಳನ್ನು ಭೇಟಿಯಾಗಲು ಮುಂದಾಗಿರುವುದರಿಂದ ಈ ಮಾತುಕತೆ ಅನಿಶ್ಚಿತತೆಯತ್ತ ಸಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.