ನವದೆಹಲಿ: ದೇಶದ ರಸ್ತೆಗಳಲ್ಲಿ 2050 ರ ವೇಳೆಗೆ ಸಾಂಪ್ರದಾಯಿಕ ವಾಹನಗಳಿಗಿಂತ ಅಧಿಕ ಎಲೆಕ್ಟ್ರಿಕ್ ವಾಹನಗಳು ಸಂಚಾರ ನಡೆಸುವಂತಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ತಾಂತ್ರಿಕ ಅಭಿವೃದ್ಧಿ ಮತ್ತು ದೇಶೀಯ ನವೀಕರಿಸಬಹುದಾದ ಅಟೋಮೊಬೈಲ್ ಉದ್ಯಮದ ಅಭಿವೃದ್ಧಿಯ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಮತ್ತು ಇಂಧನ ಚಾಲಿತ ವಾಹನಗಳ ತಂತ್ರಜ್ಞಾನಗಳೆರಡೂ ಪೂರಕವಾಗಿರಲಿವೆ. 2050 ರ ವೇಳೆಗೆ ಫಾಸಿಲ್ ರನ್ ಅಟೋಮೊಟಿವ್ ವಾಹನಗಳನ್ನು ಹಿಂದಿಕ್ಕಿ ಎಲೆಕ್ಟ್ರಿಕ್ ವಾಹನಗಳು ತಮ್ಮ ಓಟ ಮುಂದುವರಿಸಲಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಬ್ಯಾಟರಿ ತಂತ್ರಜ್ಞಾನ, ಘಟಕಗಳ ಸ್ಥಳೀಯೀಕರಣ, ದೇಶದಲ್ಲಿ ವಾಹನಗಳ ಬೇಡಿಕೆ ಹೆಚ್ಚಾಗುವುದನ್ನು ಎಲೆಕ್ಟ್ರಿಕ್ ವಾಹನಗಳು ನೀಗಿಸಲಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಅತ್ಯಂತ ಉತ್ತಮ ಸಾರಿಗೆ ವ್ಯವಸ್ಥೆ ಎಂಬುದಾಗಿ ಗುರುತಿಸಿಕೊಳ್ಳಲಿವೆ ಎಂದು ಹೇಳಿದ್ದಾರೆ. ಲಿಥಿಯಂ ಐಯಾನ್ ಬ್ಯಾಟರಿಗಳಾದ ಜಿಂಕ್ ಐಯಾನ್, ಸೋಡಿಯಂ ಐಯಾನ್, ಅಲ್ಯೂಮಿನಿಯಂ ಐಯಾನ್ ಬ್ಯಾಟರಿಗಳ ಪರ್ಯಾಯವನ್ನು ಹುಡುಕುವ ಪ್ರಯತ್ನ ಸಹ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ. ಇದರಿಂದ ಹಳೆಯ ವಾಹನಗಳನ್ನು ಕಡಿಮೆ ಮಾಡಬಹುದು ಮತ್ತು ಕಚ್ಚಾ ವಸ್ತುಗಳ ಪ್ರಮಾಣವೂ ಏರಿಕೆಯಾಗಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.