ನವದೆಹಲಿ: ರಷ್ಯಾದಲ್ಲಿ ಆಗಸ್ಟ್ 22 ರಿಂದ ಸೆಪ್ಟೆಂಬರ್ 4 ರ ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸೇನಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತೀಯ ಸೇನೆಯ 101 ಸದಸ್ಯರ ತಂಡ ಅಲ್ಲಿಗೆ ತೆರಳಲಿದೆ.
ಭಾರತೀಯ ಸೇನಾಷತಂಡ ಆರ್ಮಿ ಸ್ಕೌಟ್ಸ್ ಮಾಸ್ಟರ್ಸ್ ಸ್ಪರ್ಧೆ [ಎ.ಎಸ್.ಎಂ.ಸಿ], ಎಲ್ಬ್ರಸ್ ರಿಂಗ್, ಪೊಲಾರ್ ಸ್ಟಾರ್, ಸ್ನೈಪೆರ್ ಪ್ರೆಂಟಿಯರ್ ಮತ್ತು ಸೇಫ್ ರೂಟ್ ಆಟಗಳಲ್ಲಿ ಭಾಗವಹಿಸಲಿದ್ದು, ಅತಿ ಎತ್ತರದ ಭೂ ಪ್ರದೇಶಗಳಲ್ಲಿ ವಿವಿಧ ಬಗೆಯ ಡ್ರಿಲ್ಗಳು, ಹಿಮ ಪ್ರದೇಶದಲ್ಲಿ ಕಾರ್ಯಾಚರಣೆ, ಸ್ನೈಪರ್ ನಲ್ಲಿ ಪಾಲ್ಗೊಳ್ಳಲಿದೆ. ಅಲ್ಲದೇ ಅಡೆತಡೆಯುಳ್ಳ ಭೂ ಪ್ರದೇಶದಲ್ಲಿ ವಿವಿಧ ರೀತಿಯ ಯುದ್ಧ ತಾಂತ್ರಿಕ ಕೌಶಲ್ಯಗಳನ್ನು ಈ ಸ್ಪರ್ಧೆಯಲ್ಲಿ ಪ್ರದರ್ಶಿಲಿದೆ.
ಓಪನ್ ವಾಟರ್ ಮತ್ತು ಫಾಲ್ಕನ್ ಹಂಟಿಂಗ್ ಕ್ರೀಡೆಗಳಲ್ಲಿ ಭಾಗವಹಿಸಲು ಇಬ್ಬರು ವೀಕ್ಷಕರನ್ನು ನಿಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವ ತಂಡಗಳು ಪಾಂಟೂನ್ ಸೇತುವೆ ಮತ್ತು ಯು.ಎ.ವಿ. ಸಿಬ್ಬಂದಿ ಕೌಶಲಗಳನ್ನು ಪ್ರದರ್ಶಿಸಲಿವೆ.
ಭಾರತೀಯ ಸೇನೆಯ ವಿವಿಧ ಸಶಸ್ತ್ರಪಡೆಗಳಲ್ಲಿನ ಮೂರು ಹಂತಗಳ ಪರಿಶೀಲನೆಯ ಬಳಿಕ ಅತ್ಯುತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಈ ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಭಾರತೀಯ ಸೇನೆಯ ವೃತ್ತಿಪರತೆ ಯಾವ ಮಟ್ಟದಲ್ಲಿದೆ ಎಂಬುದರ ಪ್ರತೀಕವಾಗಿದೆ. ಈ ಸ್ಪರ್ಧೆ ಸೇನೆಯಿಂದ ಸೇನೆಯ ನಡುವೆ ಸಹಕಾರವನ್ನು ಪೋಷಿಸಲಿದ್ದು, ಭಾಗವಹಿಸುವ ರಾಷ್ಟ್ರಗಳ ನಡುವೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
2019 ರಲ್ಲಿ ಜೈಸಲ್ಮೇರ್ನಲ್ಲಿ ಆರ್ಮಿ ಸ್ಕೌಟ್ಸ್ ಮಾಸ್ಟರ್ಸ್ ಸ್ಪರ್ಧೆ ನಡೆದಿತ್ತು. ಇದರಲ್ಲಿ ವಿಶ್ವದ ಎಂಟು ರಾಷ್ಟ್ರಗಳು ಪಾಲ್ಗೊಂಡಿದ್ದು, ಭಾರತ ಪ್ರಥಮ ಸ್ಥಾನ ಪಡೆದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.