ನವದೆಹಲಿ: ಜಪಾನ್ನ ಟೊಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2020 ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿರುವ ಕ್ರೀಡಾಪಟುಗಳಿಗೆ ಭಾರತೀಯ ಕ್ರಿಕೆಟ್ ಮಂಡಳಿ ಬಹುಮಾನ ಘೋಷಿಸಿದೆ.
2020 ರ ಒಲಿಂಪಿಕ್ಸ್ನಲ್ಲಿ ಈ ವರೆಗೆ ಭಾರತಕ್ಕೆ ಒಟ್ಟು 7 ಪದಕಗಳು ಲಭಿಸಿವೆ. 1 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕಗಳನ್ನು ದೇಶಕ್ಕೆ ಭಾರತೀಯ ಕ್ರೀಡಾಪಟುಗಳು ಅರ್ಪಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಒಲಿಂಪಿಕ್ಸ್ ಸಾಧಕರಿಗೆ ನಗದು ಬಹುಮಾನ ಪ್ರಕಟಿಸಿದೆ.
ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ 1 ಕೋಟಿ ರೂ., ಬೆಳ್ಳಿ ಪದಕ ಗೆದ್ದ ಮೀರಾಬಾಯ್ ಚಾನು ಮತ್ತು ರವಿ ಕುಮಾರ್ ದಹಿಯಾಗೆ 50 ಲಕ್ಷ ರೂ. ಗಳು, ಹಾಗೆಯೇ ಕಂಚು ಗೆದ್ದ ಪಿ.ವಿ. ಸಿಂಧು, ಲವ್ಲಿನಾ, ಬಜರಂಗ್ ಪೂನಿಯಾಗೆ 25 ಲಕ್ಷ ರೂ. ಗಳನ್ನು ನೀಡುವುದಾಗಿ ತಿಳಿಸಿದೆ. ಹಾಗೆಯೇ ಕಂಚು ಗೆದ್ದ ಹಾಕಿ ತಂಡಕ್ಕೆ ಒಟ್ಟಾಗಿ 1 ಕೋಟಿ 25 ಲಕ್ಷ ರೂ. ನೀಡುವುದಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.