ಟೊಕಿಯೋ: ಒಲಿಂಪಿಕ್ಸ್ನ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ ಅವರು ಈ ಪದಕವನ್ನು ಭಾರತದ ಪ್ರಸಿದ್ಧ ಓಟಗಾರ ದಿ. ಮಿಲ್ಕಾ ಸಿಂಗ್ ಅವರಿಗೆ ಅರ್ಪಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಜಾವೆಲಿನ್ ಎಸೆತದಲ್ಲಿ ಚಿನ್ನ ಗೆಲ್ಲುವ ಮೂಲಕ, ಇಡೀ ದೇಶದ ಜನರ ಹೃದಯವನ್ನೇ ಗೆದ್ದಿರುವ ನೀರಜ್ ಅವರು ತಮ್ಮ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದು, ಈ ಗೆಲುವನ್ನು ಭಾರತದ ಹಿರಿಯ ಕ್ರೀಡಾಪಟು ಮಿಲ್ಕಾ ಸಿಂಗ್ಗೆ ಅರ್ಪಿಸುತ್ತೇನೆ. ಅವರು ಎಲ್ಲಿದ್ದರೂ ನನ್ನನ್ನು ನೋಡುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.
23 ವರ್ಷದ ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್ನಲ್ಲಿ 13 ವರ್ಷಗಳ ಬಳಿಕ ದೇಶದ ಚಿನ್ನದ ಕನಸನ್ನು ನನಸಾಗಿಸಿದ್ದಾರೆ. ಇವರ ಈ ಸಾಧನೆಗೆ ಹರ್ಯಾಣ ಸರ್ಕಾರ 6 ಕೋಟಿ ರೂ. ಘೋಷಿಸಿದೆ. ಉದ್ಯಮಿ ಆನಂದ್ ಮಹೀಂದ್ರಾ ದುಬಾರಿ ಕಾರನ್ನು ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ. ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶವೇ ನೀರಜ್ ಗೆಲುವನ್ನು ಸಂಭ್ರಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.