ನವದೆಹಲಿ: ಟೊಕಿಯೋ ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ನೀರಜ್ ಚೋಪ್ರಾ ಅವರ ಸಾಧನೆಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಚೋಪ್ರಾ ಸಾಧನೆಗೆ ಅಭಿನಂದನೆ ತಿಳಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಟೊಕಿಯೋದಲ್ಲಿ ಇತಿಹಾಸ ಬರೆಯಲಾಗಿದೆ. ನೀರಜ್ ಚೋಪ್ರಾ ಅವರ ಇಂದಿನ ಸಾಧನೆ ಶಾಶ್ವತವಾಗಿ ನೆನಪಿನಲ್ಲುಳಿಯುತ್ತದೆ. ನೀರಜ್ ಅವರು ಅತ್ಯುತ್ತಮ, ಅಸಾಧಾರಣ ಕಾರ್ಯ ನಿರ್ವಹಿಸಿದ್ದಾರೆ. ಅವರು ಅತ್ಯಂತ ಉತ್ಸಾಹದಿಂದ ಆಡಿದ್ದಾರೆ, ಅಪ್ರತಿಮ ಮನೋಭಾವ ಪ್ರದರ್ಶಿಸಿದ್ದಾರೆ. ಚಿನ್ನ ಗೆದ್ದ ಅವರಿಗೆ ಅಭಿನಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
History has been scripted at Tokyo! What @Neeraj_chopra1 has achieved today will be remembered forever. The young Neeraj has done exceptionally well. He played with remarkable passion and showed unparalleled grit. Congratulations to him for winning the Gold. #Tokyo2020 https://t.co/2NcGgJvfMS
— Narendra Modi (@narendramodi) August 7, 2021
ಚೋಪ್ರಾ ಅವರನ್ನು ಅಭಿನಂದಿಸಿ ರಾಷ್ಟ್ರಪತಿ ಕೋವಿಂದ್ ಅವರು ಟ್ವೀಟ್ ಮಾಡಿದ್ದು, ನೀರಜ್ ಚೋಪ್ರಾ ಅವರದ್ದು ಅಭೂತಪೂರ್ವ ಗೆಲುವು. ನಿಮ್ಮ ಜಾವೆಲಿನ್ನ ಚಿನ್ನ ಎಲ್ಲಾ ಅಡೆತಡೆಗಳನ್ನು ದಾಟಿ ಇತಿಹಾಸ ಬರೆದಿದೆ. ಭಾರತಕ್ಕೆ ಮೊದಲ ಚಿನ್ನದ ಪದಕ ತರುತ್ತಿದ್ದೀರಿ. ನಿಮ್ಮ ಈ ಸಾಧನೆ ದೇಶದ ಯುವಕರಿಗೆ ಸ್ಪೂರ್ತಿ. ನಿಮ್ಮ ಗೆಲುವನ್ನು ಭಾರತ ಸಂಭ್ರಮಿಸುತ್ತಿದೆ. ನಿಮಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
Unprecedented win by Neeraj Chopra!Your javelin gold breaks barriers and creates history. You bring home first ever track and field medal to India in your first Olympics. Your feat will inspire our youth. India is elated! Heartiest congratulations!
— President of India (@rashtrapatibhvn) August 7, 2021
ವೈಯಕ್ತಿಕ ವಿಭಾಗದಲ್ಲಿ 13 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಚಿನ್ನ ಗಳಿಸುವ ಕನಸನ್ನು ಇದೀಗ ನೀರಜ್ ಚೋಪ್ರಾ ನನಸು ಮಾಡಿದ್ದು, ಅವರ ಸಾಧನೆಗೆ ಇಡೀ ದೇಶವೇ ಸಂಭ್ರಮಾಚರಣೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.