ನವದೆಹಲಿ: ದೇಶದಲ್ಲಿ ಜುಲೈ ತಿಂಗಳಿನಲ್ಲಿ ಒಟ್ಟು 13.45 ಕೋಟಿ ಡೋಸ್ಗಳಷ್ಟು ಕೊರೋನಾ ಲಸಿಕೆ ನೀಡಲಾಗಿದೆ. ದೈನಂದಿನ ಸರಾಸರಿ ಲಸಿಕೆ ವಿತರಣೆ 43.41 ಲಕ್ಷ ಡೋಸ್ಗಳಷ್ಟಿರುವುದು ಗಮನಾರ್ಹ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತ ಪ್ರಾಬಲ್ಯ ಸಾಧಿಸುತ್ತಿದೆ. #SabkoVaccineMuft ಅಭಿಯಾನಕ್ಕೆ ಒಂದು ದಾರಿ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ತಿಂಗಳು ಲಸಿಕೆ ವಿತರಣೆ ವೇಗ ಪಡೆಯುತ್ತಿದೆ. ಜುಲೈ ತಿಂಗಳಿನಲ್ಲಿ ಸರಾಸರಿ 43.41ಲಕ್ಷ ಡೋಸ್ ಮತ್ತು ತಿಂಗಳಲ್ಲಿ 13.45 ಕೋಟಿ ಡೋಸ್ಗಳನ್ನು ವಿತರಿಸುವ ಮೂಲಕ ಭಾರತ ಗಮನಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಈ ವರೆಗೆ ಒಟ್ಟು 50,10,09,609 ಲಸಿಕೆ ಡೋಸ್ಗಳನ್ನು 58,08,344 ಸೆಷನ್ಗಳ ಮೂಲಕ ನಿರ್ವಹಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 49,55,138 ಡೋಸ್ ಲಸಿಕೆ ನೀಡಲಾಗಿದೆ.
ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 2.29 ಕೋಟಿ ಡೋಸ್ ಕೊರೋನಾ ಲಸಿಕೆ ಬಳಕೆಯಾಗದೆ ಉಳಿದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
India is going strong in the fight against #COVID19
Charting a path to #SabkoVaccineMuftVaccine, vaccine administration is rapidly increasing every month.
July saw a remarkable daily average of 43.41 lakh doses and a total of 13.45 crore doses pic.twitter.com/FAPJv5kGHO
— Mansukh Mandaviya (@mansukhmandviya) August 7, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.