ಆಗ್ರಾ; 17 ಶತಮಾನ ಹಳೆಯ ತಾಜ್ ಮಹಲ್ನ ಪ್ರವೇಶ ದ್ವಾರದಲ್ಲಿ ಇಡಲಾಗಿದ್ದ 60 ಕೆಜಿ ತೂಕದ ಬ್ರಿಟಿಷರ ಕಾಲದ ದೀಪದ ಗೊಂಚಲು ಕೆಳಕ್ಕೆ ಬಿದ್ದು ಒಡೆದು ಹೋಗಿದೆ. ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಆರು ಅಡಿ ಎತ್ತರ ಮತ್ತು ನಾಲ್ಕು ಅಡಿ ಅಗಲವಿದ್ದ ಈ ದೀಪದ ಗೊಂಚಲು ಲಾರ್ಡ್ ಕರ್ಝನ್ ಉಡುಗೊರೆ ನೀಡಿದ್ದಾಗಿದ್ದು, 1905 ರಲ್ಲಿ ತಾಜ್ಮಹಲ್ನ ರಾಯಲ್ ಗೇಟ್ನಲ್ಲಿ ಇದನ್ನು ಅಳವಡಿಸಲಾಗಿತ್ತು.
ಆದರೆ ಬುಧವಾರ ಈ ಸುಂದರ ದೀಪ ಗೊಂಚಲು ಕೆಳಕ್ಕೆ ಬಿದ್ದು ಒಡೆದು ಹೋಗಿದೆ. ಹಳೆಯದಾದ ಪರಿಣಾಮ ಇದು ಕೆಳಕ್ಕೆ ಬಿತ್ತು ಎಂದು ಹೇಳಲಾಗಿದೆಯಾದರೂ ಈ ಬಗ್ಗೆ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಹೀಗಾಗಿ ಪುರಾತತ್ವ ಇಲಾಖೆ ಇದರ ತನಿಖೆಗೆ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.