ಜೈಪುರ: ಯಾಂತ್ರಿಕತೆಗೆ ಸಂಬಂಧಿಸಿದಂತೆ ಭಾರತವು ಸದಾಕಾಲ ಏನಾದರೊಂದು ಹೊಸತನ್ನು ಅನ್ವೇಷಣೆ ಮಾಡುತ್ತದೆ. ಆ ಮೂಲಕ ಸುದ್ದಿಯಲ್ಲಿರುತ್ತದೆ. ಇದೀಗ ಅದಕ್ಕೆ ಪೂರಕ ಎಂಬಂತೆ ಒಳಚರಂಡಿಗಳನ್ನು ಶುಚಿಗೊಳಿಸುವುದಕ್ಕೆ ಪೂರಕವಾಗುವಂತೆ ರೊಬೋಟ್ ಒಂದನ್ನು ರಾಜಸ್ಥಾನದ ಜೈಪುರ ಮೂಲಕ ಕಂಪನಿಯೊಂದು ತಯಾರಿಸಿದೆ.
ಈ ಯಂತ್ರ ವಿಶ್ವದ ಮೊದಲ ಸೌರಚಾಲಿತ ರೊಬೋಟ್ ಆಗಿದೆ. ಇದನ್ನು ಒಳಚರಂಡಿ, ಸೆಫ್ಟಿಕ್ ಟ್ಯಾಂಕ್ಗಳನ್ನು ಶುಚಿಗೊಳಿಸುವುದಕ್ಕೆ ಅನುಕೂಲವಾಗುವಂತೆ ತಯಾರಿಸಲಾಗಿದೆ. ಮನುಷ್ಯರು ಇಂತಹ ಕೆಲಸಗಳನ್ನು ನಡೆಸುವ ಸಂದರ್ಭದಲ್ಲಿ ಜೀವ ಹಾನಿಯಂತಹ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಇಂತಹ ಅಪಾಯವನ್ನು ತಡೆಗಟ್ಟಲು ಜೈಪುರದ ಕಂಪೆನಿ ಇಂತಹ ಒಂದು ರೋಬೋಟ್ ಅನ್ನು ತಯಾರಿಸಿದೆ.
ಈ ಬಗ್ಗೆ ಮಾತನಾಡಿರುವ ಜೈಪುರದ ಕ್ಲಬ್ಫಸ್ಟ್ನ ಎಂಡಿ ಭುವನೇಶ್ ಮಿಶ್ರಾ, ಈ ರೋಬೋಟ್ನಲ್ಲಿ ಕೆಮರಾ ಅಳವಡಿಸಲಾಗಿದೆ. ಜಿಪಿಎಸ್ ಮತ್ತು 19 ಗ್ಯಾಸ್ ಡಿಟೆಕ್ಷನ್ ಸೆನ್ಸಾರ್ಗಳನ್ನು ಅಳವಡಿಸಲಾಗಿರುವುದಾಗಿ ತಿಳಿಸಿದ್ದಾರೆ. ಇದು ಮ್ಯಾನುವಲ್ ಸ್ಕ್ಯಾವೇಜಿಂಗ್ ಅಭ್ಯಾಸಕ್ಕೆ ಪರ್ಯಾಯವಾಗಿ ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ರೊಬೋಟ್ ಮಾತ್ರವಲ್ಲದೆ ಈ ಸಂಸ್ಥೆ ಇನ್ನೂ ಒಂದು ಬಹುಪಯೋಗಿ ರೋಬೋಟ್ ಅನ್ನು ಅಭಿವೃದ್ಧಿ ಮಾಡಿದ್ದು, ಇದನ್ನು ರಕ್ಷಣಾ ಕಾರ್ಯಾಚರಣೆ, ಅಗ್ನಿಶಾಮಕ, ಕೃಷಿ, ರಕ್ಷಣಾ ಕಾರ್ಯಗಳಲ್ಲಿ ಬಳಕೆ ಮಾಡಬಹುದು ಎಂದು ಮಿಶ್ರ ತಿಳಿಸಿದ್ದಾರೆ. ಹಾಗೆಯೇ ಇದು ಏಕಕಾಲಕ್ಕೆ 300 ಕೆಜಿಗಳಷ್ಟು ಭಾರವನ್ನು ನಿರ್ವಹಣೆ ಮಾಡುವ ಶಕ್ತಿ ಹೊಂದಿದೆ ಎಂದು ಅವರು ಹೇಳಿದ್ದಾರೆ. ಈ ರಕ್ಷಣಾ ರೋಬೋಟ್ಗೆ ಕ್ಸೆನಾ 5.0 ಎಂದು ಹೆಸರಿಡಲಾಗಿದೆ. ಇದು 200 ಕೆಜಿ ಭಾರ ಹೊರುವ ಜೊತೆಗೆ 100 ಕೆಜಿ ತೂಕವನ್ನು ಎಳೆಯುವ ಸಾಮರ್ಥ್ಯ ಹೊಂದಿದೆ ಎಂದು ಮಿಶ್ರ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.