ನವದೆಹಲಿ: ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ದೇಹದಾರ್ಢ್ಯ ಪಟು ಮೀರಾಬಾಯ್ ಚಾನು ಮತ್ತು ಮತ್ತೋರ್ವ ಕ್ರೀಡಾಪಟುವಿಗೆ ಒಲಿಂಪಿಕ್ಸ್ಗೂ ಮುನ್ನ ಅಮೆರಿಕದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಪ್ರಧಾನಿ ಮೋದಿ ಅವರು ನೆರವು ನೀಡಿದ್ದರು ಎಂದು ಮಣಿಪುರದ ಸಿಎಂ ಎನ್. ಬಿರೆನ್ ಸಿಂಗ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ ಬಿರೆನ್ ಸಿಂಗ್, ಚಾನು ಅವರಿಗೆ ನೆರವು ಒದಗಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಚಾನು ಅವರ ಸ್ನಾಯು ಶಸ್ತ್ರಚಿಕಿತ್ಸೆಗೆ ಅಮೆರಿಕಗೆ ತೆರಳಲು ಪ್ರಧಾನಿ ಮೋದಿ ಅವರು ನೆರವು ನೀಡಿರದೇ ಇದ್ದಲ್ಲಿ ಅವರಿಗೆ ಈ ಸಾಧನೆ ಕಷ್ಟವಾಗುತ್ತಿತ್ತು. ಚಾನು ಅವರ ಸಮಸ್ಯೆಯನ್ನು ಪ್ರಧಾನಿ ಮೋದಿ ಅವರು ಸೂಕ್ಷ್ಮವಾಗಿ ಬಗೆಹರಿಸಿದ್ದು, ಇದು ನಾಯಕನ ಹಿರಿಮೆ ಎಂದು ತಿಳಿಸಿದ್ದಾರೆ. ಅವರಿಗೆ ಧನ್ಯವಾದ ತಿಳಿಸಿದ್ದಾಗಿ ಹೇಳಿದ್ದಾರೆ.
ಚಾನು ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ವಿಚಾರವನ್ನು ತಿಳಿದ ಪ್ರಧಾನಿ ಮೋದಿ ಅವರು ವಿದೇಶದಲ್ಲಿ ಆಕೆಯ ಚಿಕಿತ್ಸೆ, ಅದಕ್ಕೆ ತಗುಲುವ ಖರ್ಚು ವೆಚ್ಚಗಳನ್ನು ಭರಿಸಿದ್ದಾಗಿಯೂ ಸಿಂಗ್ ಹೇಳಿದ್ದಾರೆ. ಆಕೆಯ ಜೊತೆ ಮತ್ತೋರ್ವ ಕ್ರೀಡಾಪಟುವಿಗೂ ಮೋದಿ ಇದೇ ರೀತಿಯ ನೆರವು ನೀಡಿದ್ದಾರೆ. ಆದರೆ ತಾವು ಈ ವಿಚಾರವನ್ನು ಎಲ್ಲೂ ಹೇಳಿಕೊಂಡಿಲ್ಲ. ನಾವು ಭಾರತೀಯರಾಗಿರುವುದಕ್ಕೆ ಮತ್ತು ಮೋದಿ ಅವರಂತಹ ಪ್ರಧಾನಿಯನ್ನು ಪಡೆದಿರುವುದಕ್ಕೆ ಹೆಮ್ಮೆ ಪಡುವುದಾಗಿ ಬಿರೆನ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸ್ವತಃ ಮೀರಾಬಾಯ್ ಚಾನು ಅವರೇ ಮಾತನಾಡಿದ್ದು, ಟೊಕಿಯೋ ಒಲಿಂಪಿಕ್ಸ್ ತರಬೇತಿ ಸಮಯದಲ್ಲಿ ನನ್ನ ಗಾಯಗಳಿಗೆ ಚಿಕಿತ್ಸೆ ಪಡೆಯಲು ಪ್ರಧಾನಿ ಮೋದಿ ಅವರು ನನಗೆ ಸಹಾಯ ಮಾಡಿದ್ದು ನಿಜ. ಚಿಕಿತ್ಸೆಗೆ ಯುಎಸ್ಗೆ ಕಳುಹಿಸಿದ ಅವರು ನನ್ನ ವಿಮಾನ ಟಿಕೆಟ್ ಮೊತ್ತ ಸೇರಿದಂತೆ ಇನ್ನೂ ಹಲವು ಸಹಾಯವನ್ನು ಮಾಡಿದ್ದಾರೆ. ಒಲಿಂಪಿಕ್ಗಾಗಿ ತರಬೇತಿ ಪಡೆಯುತ್ತಿರುವ ಸಂದರ್ಭದಲ್ಲಿಯೂ ನನಗೆ ಸಾಕಷ್ಟು ನೆರವು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
It is true that PM Modi had helped me a lot during my training for #TokyoOlympics and my injuries. He had arranged my flight tickets and sent me to the US for medical treatment. He provided me a lot of support during my training: Olympic silver medallist Mirabai Chanu pic.twitter.com/mvJggNjnjk
— ANI (@ANI) August 6, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.