ಲಡಾಕ್: ಗಡಿ ರಸ್ತೆ ಪ್ರಾಧಿಕಾರವು ಪೂರ್ವ ಲಡಾಖ್ನ ಉಮ್ಲಿಂಗ್ಲಾ ಪಾಸ್ನಲ್ಲಿ ಸಮುದ್ರ ಮಟ್ಟಕ್ಕಿಂತ 19,300 ಅಡಿ ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದ್ದು, ಆ ಮೂಲಕ ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಇದು ಚುಮಾರ್ ಸೆಕ್ಟರ್ನ ಲೇಹ್ನಿಂದ ಚಿಸುಮ್ಲೊ, ಡೆಮ್ಜೋಕ್ ಪ್ರದೇಶಗಳಿಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಲಿದೆ. ಈ ರಸ್ತೆ ಸಂಪರ್ಕ ವ್ಯವಸ್ಥೆಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಸಹ ಸಾಧ್ಯವಾಗಲಿದೆ ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ರಸ್ತೆ ನಿರ್ಮಾಣವು ನೇಪಾಳದ ದಕ್ಷಿಣ ಬೇಸ್ ಕ್ಯಾಂಪ್ 17589 ಅಡಿ, 16900 ಅಡಿಗಳ ಟಿಬೆಟ್ನ ಉತ್ತರ ಬೇಸ್ ಕ್ಯಾಂಪ್ ದಾಖಲೆಗಳನ್ನು, ಬೊಲಿವಿಯಾದ 18953 ಅಡಿ ಎತ್ತರದ ದಾಖಲೆಗಳನ್ನು ಮುರಿದಿದೆ. 50% ಗಿಂತ ಹೆಚ್ಚು ಚಳಿ (40℃ ತಾಪಮಾನ) ದ ಸಂದರ್ಭದಲ್ಲಿಯು ಈ ರಸ್ತೆ ಕಾಮಗಾರಿ ಸಂಪೂರ್ಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.