ನವದೆಹಲಿ: ಹರ್ ಘರ್ ಜಲ್ ಯೋಜನೆಯಡಿಯಲ್ಲಿ ಹರ್ಯಾಣದ ಮತ್ತೆರಡು ಜಿಲ್ಲೆಗಳಾದ ಜಿಂದ್ ಮತ್ತು ಪಲ್ವಾಲ್ಗಳ ಕುಟುಂಬಗಳು ನಳ್ಳಿ ನೀರಿನ ಸಂಪರ್ಕದ ಮೂಲಕ ತಮ್ಮ ನೀರಿನ ಅವಶ್ಯಕತೆಗಳನ್ನು ಪೂರೈಸಿಕೊಂಡಿವೆ ಎಂದು ಜಲಶಕ್ತಿ ಸಚಿವಾಲಯ ತಿಳಿಸಿದೆ.
ಹರ್ ಘರ್ ಜಲ್ ಯೋಜನೆಯಡಿ ಜಲಶಕ್ತಿ ಸಚಿವಾಲಯವು ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ 55 ಲೀ. ಶುದ್ಧ ಕುಡಿಯುವ ನೀರು ಒದಗಿಸುವ ಗುರಿಯನ್ನು ಸಚಿವಾಲಯ ಹೊಂದಿದೆ. ಅದಕ್ಕೆ ಪೂರಕವಾಗಿ ಹರಿಯಾಣದ ಇತರ ಜಿಲ್ಲೆಗಳಲ್ಲಿಯೂ ನೀರು ಸರಬರಾಜಿಗೆ ಸಂಪರ್ಕ ಹೊಂದಿರುವ 82% ಗಳಷ್ಟು ಮನೆಗಳಿಗೂ ಈ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ.
ಜಲಶಕ್ತಿ ಸಚಿವಾಲಯದ ಈ ಯೋಜನೆಯಡಿ ಬಿಹಾರದಲ್ಲಿ 85.18%, ಗುಜರಾತ್ನಲ್ಲಿ 84.32%, ಹಿಮಾಚಲ ಪ್ರದೇಶದಲ್ಲಿ 79.67%, ಪಂಜಾಬ್ನಲ್ಲಿ 81.57% ರಷ್ಟು ಶುದ್ಧ ಕುಡಿಯುವ ನೀರು ಒದಗಿಸುವ ಗುರಿಯನ್ನು ತಲುಪಿದ್ದರೆ, ಇತರ ರಾಜ್ಯಗಳು 100% ಗುರಿ ಸಾಧಿಸುವ ಪ್ರಯತ್ನ ನಡೆಸುತ್ತಿವೆ ಎಂದು ಸಚಿವಾಲಯ ಹೇಳಿದೆ.
ಹರ್ಯಾಣದಲ್ಲಿ ಸುಮಾರು 31 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಇದರಲ್ಲಿ ಮೇವತ್ ಜಿಲ್ಲೆಯ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರಿನ ನಳ್ಳಿ ಸಂಪರ್ಕ ಒದಗಿಸಲಾಗಿದೆ. 2019 ರಲ್ಲಿ ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದು, ಕೇವಲ ಎರಡೇ ವರ್ಷದ ಅವಧಿಯಲ್ಲಿ ಹರ್ಯಾಣದ 30.68 ಲಕ್ಷ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲಾರಂಭಿಸಿವೆ. ಹಾಗೆಯೇ ಅಲ್ಲಿನ 12,988 ಶಾಲೆಗಳು, 21,789 ಅಂಗನವಾಡಿಗಳಿಗೂ ಈ ನಳ್ಳಿ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಿರುವುದಾಗಿ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.