
ವಾಷಿಂಗ್ಟನ್: ಭಾರತಕ್ಕಾಗಿ ,ಅಮೆರಿಕದಲ್ಲಿನ ಭಾರತೀಯ ಮೂಲದ ವೈದ್ಯರು 37.05 ಕೋಟಿ ರೂ. ಕೊರೋನಾ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ ಎಂದು ಅಮೆರಿಕದ ಭಾರತೀಯ ಮೂಲದ ವೈದ್ಯರ ಸಂಘಟನೆ ತಿಳಿಸಿದೆ.
ಈ ನಿಧಿಯಲ್ಲಿ ಭಾರತದ 45 ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ 2300 ಆಮ್ಲಜನಕ ಸಾಂಧ್ರಕಗಳು, ತಲಾ 100 ವೆಂಟಿಲೇಟರ್ಗಳು, ನಸಲ್ ಕ್ಯನುಲಾ ಉಪಕರಣಗಳನ್ನು ಸಂಘಟಿಸಿ ನೀಡಲಾಗಿದೆ ಎಂದು ಅಸೋಸಿಯೇಷನ್ ಫಾರ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಒರಿಜಿನ್ ತಿಳಿಸಿದೆ.
ಭಾರತದಲ್ಲಿ ಆಗಸ್ಟ್ ಅಂತ್ಯದಲ್ಲಿ ಕೊರೋನಾ ಮೂರನೇ ಅಲೆ ಬೀಸುವ ಸಂಭಾವ್ಯತೆ ಇದ್ದು, ಈ ನಿಟ್ಟಿನಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದಂತೆ ಅಗತ್ಯ ನೆರವು, ವಸ್ತುಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಭಾರತ ಪ್ರಯತ್ನ ನಡೆಸುತ್ತಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಬೀಸಲಿರುವ ಕೊರೋನಾ ಮೂರನೇ ಅಲೆಯ ನಿಯಂತ್ರಣ ಹಿನ್ನೆಲೆಯಲ್ಲಿ ಈ ನಿಧಿಯನ್ನು ಬಳಕೆ ಮಾಡುವುದಾಗಿ ಸಂಘಟನೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


