
ಬೆಂಗಳೂರು: ಜುಲೈ ತಿಂಗಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅತೀ ಕಡಿಮೆ ಕೊರೋನಾ ಸೋಂಕಿತರ ಪ್ರಮಾ ದಾಖಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಕೊರೋನಾ ಪ್ರಕರಣಗಳ ಮೂವಿಂಗ್ ಗ್ರೋತ್ ರೇಟ್ ಕರ್ನಾಟಕದಲ್ಲಿ 2% ಗಳಷ್ಟು ದಾಖಲಾಗಿದ್ದು, ಆ ಮೂಲಕ ದೇಶದಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾದ ರಾಜ್ಯ ಎಂದು ಗುರುತಿಸಿಕೊಂಡಿದೆ.
ತಮಿಳುನಾಡಿನ ಮೂವಿಂಗ್ ಗ್ರೋತ್ ರೇಟ್ 3%, ಮಹಾರಾಷ್ಟ್ರದ ಮೂವಿಂಗ್ ಗ್ರೋತ್ ರೇಟ್ 4%, ಒಡಿಶಾ 8% ಹಾಗೂ ಕೇರಳದಲ್ಲಿ 13% ದಾಖಲಾಗಿದ್ದು, ದೇಶದ ಎಲ್ಲ ರಾಜ್ಯಗಳ ಪೈಕಿ ಅತಿ ಹೆಚ್ಚು ಮೂವಿಂಗ್ ಗ್ರೋತ್ ರೇಟ್ ದಾಖಲಾದ ರಾಜ್ಯ ಕೇರಳವಾಗಿದೆ ಎಂದು ಈ ವರದಿ ಹೇಳಿದೆ. ಹಾಗೆಯೇ ದೇಶದಲ್ಲಿ ಒಟ್ಟು ಮರಣ ಪ್ರಮಾಣ 9% ಗಳಿಷ್ಟು, ಕರ್ನಾಟಕದಲ್ಲಿ 4% ದಾಖಲಾಗಿದೆ. ತಮಿಳುನಾಡಿಗೆ ಸಂಬಂಧಿಸಿದಂತೆ 5%, ಮಹಾರಾಷ್ಟ್ರ 9%, ಒಡಿಶಾ 41%, ಕೇರಳ 25% ಮರಣ ಪ್ರಮಾಣ ದಾಖಲಿಸಿದೆ ಎಂದು ವರದಿಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


