ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಆತಂಕ ಸೃಷ್ಟಿ ಮಾಡಲು ಹುನ್ನಾರ ನಡೆಸಿರುವ ಮೋಸ್ಟ್ ವಾಂಟೆಡ್ 10 ಉಗ್ರಗಾಮಿಗಳ ಪಟ್ಟಿಯನ್ನು ರಾಜ್ಯ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಮೂವರು ಉಗ್ರರ ಹೆಸರುಗಳು ಸೇರ್ಪಡೆಯಾಗಿವೆ. ಈ ಪಟ್ಟಿಯಲ್ಲಿ ಸೋಮವಾರ ರಾತ್ರಿ ಜಮ್ಮು ಕಾಶ್ಮೀರ ವಲಯ ಪೊಲೀಸರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕೆಲ ಸಮಯಗಳಿಂದ ಸಕ್ರಿಯರಾಗಿದ್ದ ಏಳು ಉಗ್ರರ ಹೆಸರುಗಳು ಸೇರಿದಂತೆ ಒಟ್ಟು ಹತ್ತು ಮೋಸ್ಟ್ ವಾಂಟೆಡ್ ಉಗ್ರರ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಲೀಂ ಫರೆ, ಯೂಸುಫ್ ಕಾಂಟ್ರೋ, ಅಬ್ಬಾಸ್ ಶೇಕ್, ರಿಯಾಜ್ ಶೆಟರ್ಗುಂಡ್, ಫಾರೂಕ್ ನಲಿ, ಜುಬೇರ್ ವಾನಿ, ಅಶ್ರಫ್ ಮೊಲ್ವಿ ಎಂಬ ಹಳೆ ಉಗ್ರಗಾಮಿಗಳ ಜೊತೆಗೆ ಸಾಕಿಬ್ ಮಂಜೂರ್, ಉಮರ್ ಮುಸ್ತಾಕ್ ಖಾಂಡೆ, ವಕೀಲ ಶಾ ಎಂಬ ಹೊಸ ಉಗ್ರರು ಈ ಪಟ್ಟಿಯಲ್ಲಿದ್ದಾರೆ.
2021 ರಲ್ಲಿ ಜಮ್ಮು ಕಾಶ್ಮೀರದಲ್ಲಿ ಈವರೆಗೆ ಸುಮಾರು 90 ಉಗ್ರರನ್ನು ಭದ್ರತಾ ಪಡೆಗಳು ವಧಿಸಿದ್ದು, ಇವರಲ್ಲಿ ಹೆಚ್ಚಿನವರು ಎಲ್ಇಟಿ, ಜೈಶ್ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದಾರೆ. ಇವರಲ್ಲಿ ಬಹುತೇಕ ಉಗ್ರರು ಸ್ಥಳೀಯರಾಗಿದ್ದರೆ, ಮತ್ತೆ ಕೆಲವರು ಪಾಕಿಸ್ಥಾನಿ ಮೂಲದವರು ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.