ನವದೆಹಲಿ: ಈ ವರ್ಷದಿಂದ ಭಾರತದಲ್ಲಿ ಡೀಪ್ ಓಷಿಯನ್ ಮಿಷನ್ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಭೂ ವಿಜ್ಞಾನ ಸಚಿವಾಲಯವು ಐದು ವರ್ಷಗಳಿಗೆ ಸಂಬಂಧಿಸಿದಂತೆ ಒಟ್ಟು 4,077 ಕೋಟಿ ರೂ. ಬಜೆಟ್ನಲ್ಲಿ ಡೀಪ್ ಓಷಿಯನ್ ಮಿಷನ್ ಅನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಈ ಯೋಜನೆಯ ಮೂಲಕ ಆಳ ಸಾಗರ ಸಂಪನ್ಮೂಲಗಳ ಅನ್ವೇಷಣೆ, ಸಮುದ್ರದ ಸುಸ್ಥಿರ ಬಳಕೆಗಾಗಿ ಆಳ ಸಮುದ್ರ ತಂತ್ರಜ್ಞಾನ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಸಿಇಎ ತಿಳಿಸಿದೆ.
ಹಂತ ಹಂತವಾಗಿ ಈ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಮೂರು ವರ್ಷಗಳ ಮೊದಲ ಹಂತದಲ್ಲಿ ಅಂದಾಜು 2823.4 ಕೋಟಿ ರೂ. ವೆಚ್ಚವಾಗಲಿದೆ ಎಂದು ಸಚಿವಾಲಯ ತಿಳಿಸಿದೆ. ಇದರಲ್ಲಿ 6 ಸಾವಿರ ಮೀ. ಆಳಕ್ಕೆ ಮಾನವ ಸಹಿತ ಸಬ್ಮರ್ಸಿಬಲ್ ರೇಟಿಂಗ್ ನೀಡಲಾಗಿದೆ. ಆಳ ಸಮುದ್ರ ಗಣಿಗಾರಿಕೆ, ಆಳ ಸಮುದ್ರದ ಖನಿಜ ಸಂಪನ್ಮೂಲಗಳ ಪರಿಶೋಧನೆ, ಸಮುದ್ರ ಜೀವವೈವಿಧ್ಯ, ಸಾಗರ ಪರಿಶೋಧನೆಗೆ ಸಂಶೋಧಾನಾ ಹಡಗೌನ ಸ್ವಾಧೀನ, ಆಳ ಸಮುದ್ರ ಅವಲೋಕನ ಮತ್ತು ಸಾಗರ ಜೀವಶಾಸ್ತ್ರದಲ್ಲಿ ಸಾಮರ್ಥ್ಯ ವೃದ್ಧಿಯ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಕಾರ್ಯಗಳು ನಡೆಯಲಿವೆ. ಈ ಎಲ್ಲ ಘಟಕಗಳು 2021 ರಲ್ಲಿ ಆರಂಭವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.