ನವದೆಹಲಿ: ಇಸ್ರೋ ಸಂಸ್ಥೆಯು ಜಿಯೋ- ಸಮಕಾಲಿಕ ಉಪಗ್ರಹ ಉಡಾವಣಾ ವಾಹನ (GSLV) D6 ಸಹಾಯದಿಂದ ಒಯ್ಯುವ ಭಾರತದ ಹೊಸ ಸಂಪರ್ಕ ಉಪಗ್ರಹ GSAT-6 ನ್ನು ಆ.27ರಂದು ಶ್ರೀಹರಿಕೋಟದಲ್ಲಿ ಉಡಾವಣೆಗೊಳಿಸಲಿದೆ.
ಇದರ ವೈಶಿಷ್ಟ್ಯವೆಂದರೆ ಈ ಉಪಗ್ರವು 6 ಮೀ. ವ್ಯಾಸದ ಎಸ್ ಬ್ಯಾಂಡ್ ಆಂಟೆನಾ ಹೊಂದಿದೆ. ಇದನ್ನು ಭಾರತದ ಭೂ ಪ್ರದೇಶದಲ್ಲಿ ಫೈವ್ ಸ್ಪಾಟ್ ಬೀಮ್ಗಳನ್ನಾಗಿ ಬಳಸಲಾಗುವುದು ಎಂದು ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್ ಹೇಳಿದ್ದಾರೆ.
GSAT-6 ಇಸ್ರೋದಿಂದ ನಿರ್ಮಿಸಲಾಗುತ್ತಿರುವ 25ನೇ ಭೂಸ್ಥಾಯೀ ಸಂಪರ್ಕ ಉಪಗ್ರಹವಾಗಿದ್ದು, ಜಿಸ್ಯಾಟ್ನ ಸಾಲಿನಲ್ಲಿ 12ನೇ ಉಪಗ್ರಹವಾಗಿದೆ. ಈ ಉಪಗ್ರಹ ಫೈವ್ ಸ್ಪಾಟ್ ಬೀಮ್ ಜೊತೆಗೆ ಎಸ್ ಬ್ಯಾಡ್ ಕಿರಣಗಳು ಹಾಗೂ ಕಾರ್ಯತಂತ್ರದ ಬಳಕೆದಾರರಿಗೆ ಸಿ-ಬ್ಯಾಂಡ್ ಸಂಪರ್ಕ ಕಿರಣಗಳನ್ನು ಹೊರಡಿಸಲಿದೆ. ಈ ಉಪಗ್ರಹವು 2117 ಕೆ.ಜಿ. ತೂಕವನ್ನು ಹೊಂದಿದೆ.
ಭೂಸ್ಥಾಯೀ ವರ್ಗಾವಣಾ ಕಕ್ಷೆಯಲ್ಲಿ ಇದರ ಅಳವಡಿಕೆ ನಂತರ ಹಾಸನದಲ್ಲಿರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ವ್ಯವಸ್ಥೆ ಇದರ ಕಾರ್ಯ ನಿರ್ವಹಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.