ಲಡಾಕ್: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಕಾರ್ಗಿಲ್ನ ಆರ್ಯನ್ ಕಣಿವೆಯ ಹಳ್ಳಿಗಳಿಗೆ ಪವರ್ಗ್ರಿಡ್ನಿಂದ ವಿದ್ಯುತ್ ಸಂಪರ್ಕ ತಲುಪುವಂತಾಗಿದೆ.
ಈ ವರೆಗೆ ಈ ಹಳ್ಳಿಗಳಿಗೆ ಡಿಸೇಲ್ ಜನರೇಟರ್ ಮೂಲಕ ದಿನದ ಸಂಜೆಯ ವೇಳೆಯಲ್ಲಿ 5 – 6 ಗಂಟೆಗಳ ಅವಧಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಇದೀಗ ಗ್ರಾಮೀಣ ವಿದ್ಯುದೀಕರಣ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅಭಿವೃದ್ಧಿ ಕಾರ್ಯಕ್ರಮದಡಿ 24×7 ವಿದ್ಯುತ್ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
ಲಾಲಾಕ್ನಲ್ಲಿ ಭಾರತೀಯ ವಿದ್ಯುತ್ ಮಂಡಳಿಯು 40 ಕಿ. ಮೀ. ಟ್ರಾನ್ಸ್ಮಿಷನ್ ಲೈನ್ ಅನ್ನು ಯಶಸ್ವಿಯಾಗಿ ಅಳವಡಿಸಿ ಲಲುಂಗ್, ಸಿಲ್ಮೂ, ಬಟಾಲಿಕ್, ಡಾರ್ಚಿಕ್, ಹರ್ದಾಸ್, ಸಿನಿಕ್ಸೆ, ಗರ್ಕಾನ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಆ ಮೂಲಕ ಆರ್ಯನ್ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ 220 ಕೆವಿ ವಿದ್ಯುತ್ ಒದಗಿಸಲಾಗುತ್ತಿದೆ. ಶ್ರೀನಗರ – ಲೇಹ್ ಪ್ರಸರಣ ಮಾರ್ಗದ ಮೂಲಕ ರಾಷ್ಟ್ರೀಯ ಗ್ರಿಡ್ಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.
ನಿರಂತರ ವಿದ್ಯುತ್ ಸಂಪರ್ಕದಿಂದ ಜನರ ಜೀವನ ಮಟ್ಟ ಸುಧಾರಣೆಯಾಗುವ ಜೊತೆಗೆ ಪ್ರವಾಸೋದ್ಯಮಕ್ಕೂ ಇದು ಉತ್ತೇಜನ ನೀಡಲಿದೆ. ಒಂದು ರಾಷ್ಟ್ರ, ಒಂದು ಗ್ರಿಡ್, ಒಂದು ಫ್ರೀಕ್ವೆನ್ಸಿ ಎಂಬ ಕೇಂದ್ರ ಸರ್ಕಾರದ ಕಲ್ಪನೆ ಕಾರ್ಗಿಲ್ನಲ್ಲಿ ಜೀವ ಪಡೆದಿದೆ.
ಪ್ರಧಾನಿ ಮೋದಿ ಸರ್ಕಾರ ಲಡಾಕ್ನ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಗ್ರಿಡ್ ಜೊತೆಗೆ ಸಂಪರ್ಕ ಸಾಧಿಸುವುದಕ್ಕೆ ಅನುಕೂಲವಾಗುವಂತೆ 1309.71 ಕೋಟಿ ರೂ.ಗಳ ಯೋಜನೆಗೆ ಅನುಮೋದಿಸಿತ್ತು. ಇದೀಗ ವಿದ್ಯುತ್ ಸಂಪರ್ಕ ಸಹ ದೊರೆಯುತ್ತಿದ್ದು ಭಾರತೀಯ ಸೇನೆ ಮತ್ತು ಜನಸಾಮಾನ್ಯರಿಗೆ ಇಪ್ಪತ್ತನಾಲ್ಕು ಗಂಟೆಗಳ ವರೆಗು ವಿದ್ಯುತ್ ಪೂರೈಕೆ ಮಾಡಲಿದೆ.
ಕೆಲ ವರದಿಗಳ ಪ್ರಕಾರ ಪ್ರಧಾನಿ ಮೋದಿ ಸರ್ಕಾರ ಕ್ಲೀನ್ ಎನರ್ಜಿ ಇನಿಷಿಯೇಟಿವ್ ಅಡಿಯಲ್ಲಿ ಕ್ರಮವಾಗಿ 5000 ಸಾವಿರ ಮೆಗಾವ್ಯಾಟ್, 2500 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಯನ್ನು ಲಡಾಕ್ ಮತ್ತು ಕಾರ್ಗಿಲ್ಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. 2023 ರ ವೇಳೆಗೆ 45 ಸಾವಿರ ಕೋಟಿ ರೂ. ಗಳ ಹೂಡಿಕೆಯಲ್ಲಿ ಪೂರ್ಣಗೊಳಿಸಲಾಗುವುದಾಗಿಯೂ ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.