ಸಿಡ್ನಿ: ಆಸ್ಟ್ರೇಲಿಯಾಗೆ ಕಳ್ಳತನದ ಮೂಲಕ ಅಕ್ರಮವಾಗಿ ರಫ್ತಾಗಿದ್ದ 14 ಕಲಾಕೃತಿಗಳನ್ನು ಭಾರತಕ್ಕೆ ಮತ್ತೆ ಹಿಂದಿರುಗಿಸಲಿರುವುದಾಗಿ ನ್ಯಾಷನಲ್ ಗ್ಯಾಲರಿ ತಿಳಿಸಿದೆ.
ಈ ಕಲಾಕೃತಿಗಳನ್ನು ಕ್ಯಾನ್ಬೆರಾ ಗ್ಯಾಲರಿಯು ಗುರುತಿಸಿದೆ. ಇದರಲ್ಲಿ ಶಿಲ್ಪಗಳು, ಛಾಯಾಚಿತ್ರಎಳು ಸ್ಕ್ರಾಲ್ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಇವುಗಳಲ್ಲಿ 12 ನೇ ಶತಮಾನದ ಪೂರ್ವದ ಕಲಾಕೃತಿಗಳು ಇದ್ದು, ಕೆಲವೇ ತಿಂಗಳಲ್ಲಿ ಇವನ್ನು ಭಾರತಕ್ಕೆ ಮರಳಿ ಹಸ್ತಾಂತರ ಮಾಡಲಾಗುತ್ತದೆ ಎಂದು ಆಸ್ಟ್ರೇಲಿಯಾ ಹೇಳಿದೆ.
ಈ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸುವ ನಿರ್ಣಯ ನಮಗೆ ಸಮಾಧಾನ ನೀಡಿದೆ ಎಂದು ಆಸ್ಟ್ರೇಲಿಯಾ ಹೇಳಿದೆ. ಈ ಕಲಾಕೃತಿಗಳಲ್ಲಿ 13 ಆಪರೇಶನ್ ಹಿಡನ್ ಐಡಲ್ ಎಂಬ ಬೃಹತ್ ಯುಎಸ್ ಫೆಡರಲ್ ತನಿಖೆಯ ವಿಷಯವಾಗಿತ್ತು. ಇದರಲ್ಲಿ 5 ಮಿಲಿಯನ್ ಯುಎಸ್ ಡಾಲರ್ ಬೆಲೆಬಾಳುವ ತಮಿಳುನಾಡಿನ ದೇವಾಲಯವೊಂದರಿಂದ ಕಳವು ಮಾಡಲಾದ ಶಿವನ ಮೂರ್ತಿಯೂ ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.