ರಾಂಚಿ: 16 ವರ್ಷದ ಅಂಧ ಬಾಲಕಿ ತುಂಪಾ ಕುಮಾರಿ ಹಾಡಿದ ಬಾಲಿವುಡ್ ಗೀತೆ ‘ಸುನ್ ರಹಾ ಹೈ ನಾ ತೂ’ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಸುಮಧುರ ಹಾಡಿಗಾಗಿ ಆಕೆ ಲಕ್ಷಗಟ್ಟಲೆ ಹಿಟ್ಸ್ಗಳನ್ನು ಪಡೆದುದು ಮಾತ್ರವಲ್ಲ, ಈ ದೇಶದ ಉನ್ನತ ಸಂಗೀತಗಾರರೊಬ್ಬರಿಂದ ತರಬೇತಿಯನ್ನೂ ಪಡೆಯುವ ಅವಕಾಶವನ್ನೂ ಪಡೆದುಕೊಂಡಿದ್ದಾಳೆ.
ಯೂ ಟ್ಯೂಬ್ನಲ್ಲಿ ಆಕೆಯ ಹಾಡನ್ನು ಕೇಳಿ ಭಾವಪರವಶರಾದ ಖ್ಯಾತ ಗಾಯಕ ಹರಿಹರನ್ ಅವರು ತುಂಪಾಗೆ ವೃತ್ತಿಪರ ಸಂಗೀತ ತರಬೇತಿಯನ್ನು ನೀಡಲು ಮುಂದಾಗಿದ್ದಾರೆ.
ತುಂಪಾ ಸ್ವರದಲ್ಲಿ ಅನನ್ಯ ಗುಣಮಟ್ಟವಿದೆ, ಇದಕ್ಕೆ ಇನ್ನಷ್ಟು ಉತ್ತೇಜನ ಅಗತ್ಯ, ಸಂಗೀತದ ತಾಂತ್ರಿಕ ಅಂಶಗಳ ಬಗ್ಗೆ ಆಕೆಗೆ ತರಬೇತಿಯನ್ನು ನೀಡುವ ಅಗತ್ಯವಿದೆ, ಇದರಿಂದ ಆಕೆ ಒಳ್ಳೆಯ ಗಾಯಕಿಯಾಗಿ ಹೊರಹೊಮ್ಮುತ್ತಾಳೆ ಎಂದು ಹರಿಹರನ್ ಅಭಿಪ್ರಾಯಪಟ್ಟಿದ್ದಾಳೆ.
ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡ ತುಂಪಾ ಹುಟ್ಟು ಅಂಧೆ. ಸದ್ಯ ಆಕೆ ತನ್ನ ಸಂಬಂಧಿಗಳ ಮನೆಯಲ್ಲಿದ್ದಾಳೆ. ಈಕೆಗೆ ಇಬ್ಬರು ಸಹೋದರಿಯರಿದ್ದು, ಒಬ್ಬಾಕೆ ಆರ್ಥಿಕ ಸಂಕಷ್ಟ ಸರಿದೂಗಿಸಲು 14ನೇ ವಯಸ್ಸಿನಿಂದ ಕೆಲಸಕ್ಕೆ ಹೋಗುತ್ತಿದ್ದಾಳೆ.
ಇದೀಗ ಆಕೆ ಹರಿಹರನ್ ನೇತೃತ್ವದಲ್ಲಿ ಸಂಗೀತ ತರಬೇತಿ ಪಡೆಯಲು ಮುಂಬಯಿಗೆ ಬಂದಿಳಿದಿದ್ದಾಳೆ. ತನಗೆ ದೊರೆಯುತ್ತಿರುವ ಬೆಂಬಲದಿಂದ ಆಕೆ ಸಂತೋಷಗೊಂಡಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.