ಹೈದರಾಬಾದ್: ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ತೆಲಂಗಾಣದ ಐತಿಹಾಸಿಕ ರಾಮಪ್ಪ ದೇವಸ್ಥಾನ ಗುರುತಿಸಲ್ಪಟ್ಟಿದೆ.
ಅತ್ಯುತ್ತಮ ಶಿಲ್ಪಕಲೆಗಳಿಗಾಗಿ ವಿಶ್ವ ಮನ್ನಣೆ ಗಳಿಸಿರುವ ಈ ದೇಗುಲವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಗುರುತಿಸಿದೆ. ಚೀನಾದಲ್ಲಿ ನಡೆದ ವಿಶ್ವ ಪರಂಪರಾ ಸಮಿತಿಯ ಸಭೆಯಲ್ಲಿ ಈ ನಿರ್ಣಯವನ್ನು ಯುನೆಸ್ಕೋ ಪ್ರಕಟಿಸಿದೆ. 12 ನೇ ಶತಮಾನದ ಕಾಕತೀಯರ ವಾಸ್ತುಶಿಲ್ಪದ ಅದ್ಭುತವನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ ಮಾಡುತ್ತಿರುವುದಾಗಿ ತಿಳಿಸಿದೆ.
ಈ ದೇವಾಲಯವು ಮುಲುಗು ಜಿಲ್ಲೆಯ ವೆಂಕಟಪುರ ಮಂಡಲದ ಪಾಲೆಂಪೆಟ್ ಗ್ರಾಮದಲ್ಲಿದೆ. ಇಲ್ಲಿನ ಶಿಲ್ಪಕಲೆಗಳು ಅಸಾಧಾರಣವಾಗಿದೆ. ಈ ದೇವಾಲಯ ಕಾಕತೀಯ ರಾಜರ ಆಳ್ವಿಕೆ ಸಂದರ್ಭದಲ್ಲಿ ನಿರ್ಮಾಣವಾಗಿದೆ. ಈ ಶಿಲ್ಪಗಳನ್ನು ರಾಮಪ್ಪ ಅವರ ಕೌಶಲ್ಯದಡಿ ನಿರ್ಮಾಣ ಮಾಡಲಾಗಿದೆ.
ಯುನೆಸ್ಕೋ ಮಾಡಿರುವ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಅತ್ಯುತ್ತಮ, ಎಲ್ಲರಿಗೂ ಅಭಿನಂದನೆಗಳು, ವಿಶೇಷವಾಗಿ ತೆಲಂಗಾಣದ ಜನರಿಗೆ ಎಂದು ಹೇಳಿದ್ದಾರೆ. ಅಲ್ಲದೆ ಅಪ್ರತಿಮ ರಾಮಪ್ಪ ದೇವಾಲಯವು ಮಹಾನ್ ಕಾಕತೀಯ ರಾಜವಂಶದ ಸುಂದರ ಕರಕುಶಲತೆಯನ್ನು ಪ್ರತಿಬಿಂಬಿಸುತ್ತದೆ. ಈ ಭವ್ಯವಾದ ದೇಗುಲ ಸಂಕೀರ್ಣಕ್ಕೆ ಖಂಡಿತವಾಗಿಯೂ ಭೇಟಿ ನೀಡಿ ಅದರ ಭವ್ಯತೆಯನ್ನು ನೀವೇ ಸವಿಯಬೇಕು ಎಂದು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Excellent! Congratulations to everyone, specially the people of Telangana.
The iconic Ramappa Temple showcases the outstanding craftsmanship of great Kakatiya dynasty. I would urge you all to visit this majestic Temple complex and get a first-hand experience of it’s grandness. https://t.co/muNhX49l9J pic.twitter.com/XMrAWJJao2
— Narendra Modi (@narendramodi) July 25, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.