ನವದೆಹಲಿ: ದೇಶದ 12 ವಿಶ್ವವಿದ್ಯಾಲಯಗಳಿಗೆ ಉಪ ಕುಲಪತಿಗಳ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅನುಮೋದನೆ ನೀಡಿದ್ದಾರೆ.
ಈ ಸಂಬಂಧ ಶಿಕ್ಷಣ ಇಲಾಖೆ ಸಚಿವಾಲಯ ತಿಳಿಸಿದ್ದು, ರಾಷ್ಟ್ರದ 12 ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕಕ್ಕೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ ಎಂದಿದೆ. ಇದರಲ್ಲಿ ಹರ್ಯಾಣ ವಿವಿ, ಹಿಮಾಚಲ ಪ್ರದೇಶ, ಜಮ್ಮು, ಜಾರ್ಖಂಡ್, ಕರ್ನಾಟಕ, ತಮಿಳುನಾಡು, ಹೈದರಾಬಾದ್ ವಿವಿಗಳು ಸೇರಿವೆ.
ಹಾಗೆಯೇ ದಕ್ಷಿಣ ಬಿಹಾರದ ಕೇಂದ್ರ ವಿಶ್ವವಿದ್ಯಾಲಯ (ಗಯಾ), ಮಣಿಪುರ ವಿವಿ, ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿವಿ, ಈಶಾನ್ಯ ಹಿಲ್ ವಿವಿ, ಬಿಲಾಸ್ಪುರದ ಗುರು ಘಾಸಿದಾಸ್ ವಿವಿಗಳಿಗೆ ಹೊಸ ವಿಸಿ ಗಳನ್ನು ನೇಮಕ ಮಾಡಲು ಅನುಮೋದನೆ ದೊರೆತಿದೆ.
President Ram Nath Kovind approves the appointment of Vice-Chancellors of 12 Central Universities: Ministry of Education pic.twitter.com/oYDGX5y8mG
— ANI (@ANI) July 23, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.