ನವದೆಹಲಿ : ಭಾರತದಾದ್ಯಂತ ದಿನೇ ದಿನೇ ಒಲಿಂಪಿಕ್ಸ್ ಉತ್ಸಾಹ ಹೆಚ್ಚಾಗುತ್ತಿದ್ದು, ದೇಶದ ನಾನಾ ಮೂಲೆಗಳಿಂದ ಕ್ರೀಡಾಭಿಮಾನಿಗಳು ಇಂಡಿಯನ್ ಅಥ್ಲೀಟ್ಸ್ ಗಳಿಗೆ ಚಿಯರ್ಸ್ ಹೇಳುತ್ತಿದ್ದಾರೆ ಮತ್ತು ಅವರಿಗೆ ಬೆಂಬಲದ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ದೇಶವನ್ನು ಪ್ರತಿನಿಧಿಸುವ ಅಥ್ಲೀಟ್ಗಳನ್ನು ಬೆಂಬಲಿಸಿ ಜನರು ತಮ್ಮ ಮಿತ್ರರೂ ಹಾಗೂ ಕುಟುಂಬದ ಸದಸ್ಯರೊಂದಿಗೆ ವಿಡಿಯೋ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ #HumaraVictoryPunch ನೊಂದಿಗೆ ಹಂಚಿಕೊಳ್ಳುವಂತೆ ಕರೆ ನೀಡಿದ್ದಾರೆ.
ಠಾಕೂರ್ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಭಾರತೀಯ ಒಲಿಂಪಿಕ್ ತಂಡಕ್ಕೆ ಬೆಂಬಲ ನೀಡುವ ವಿಡಿಯೋಗಳನ್ನು ಮಾಡಿ ಅವುಗಳನ್ನು ಐದು ಜನರಿಗೆ ಟ್ಯಾಗ್ ಮಾಡುವ ಮೂಲಕ ಅವರಿಗೂ ವಿಡಿಯೋಗಳನ್ನು ಹಂಚಿಕೊಳ್ಳಲು ಆಹ್ವಾನಿಸಬೇಕು’’ ಎಂದು ಹೇಳಿದ್ದಾರೆ. ಅಲ್ಲದೆ ಅವರು #Cheer4India ಅನ್ನು ಜನಾಂದೋಲನವಾಗಿ ಮಾಡುವಂತೆ ಮನವಿ ಮಾಡಿದ್ದಾರೆ.
ಸಚಿವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಅದನ್ನು ಐದು ವ್ಯಕ್ತಿಗಳಿಗೆ ಟ್ಯಾಗ್ ಮಾಡಿದ್ದಾರೆ. ಅವರು ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಕ್ರಿಕೆಟ್ ಪಟು ವೀರೇಂದ್ರ ಸೆಹ್ವಾಗ್, ನಟ ಅಕ್ಷಯ್ ಕುಮಾರ್, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರನ್ನು ಹೆಸರಿಸಿದ್ದಾರೆ.
ये है मेरी टीम और ये #Tokyo2020 Olympics में हमारे खिलाड़ियों को cheer करने के लिए #HumaraVictoryPunch
Tag 5 friends/family members to show your support for the
Indian🇮🇳Olympics Team!I nominate:@KirenRijiju@virendersehwag@akshaykumar@NSaina@vijayshekhar#Cheer4India pic.twitter.com/54UU0gZEp7
— Anurag Thakur (@ianuragthakur) July 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.