ಬೆಂಗಳೂರು: ಇಲ್ಲಿನ ನರ್ಸರಿ ಹಾಗೂ ಪ್ರಾಥಮಿಕ ಶಾಲೆಗಳು ಡಿಜಿಟಲೀಕರಣಗೊಂಡಿವೆ. ಮಕ್ಕಳ ಕಲಿಯುವಿಕೆ ಡಿಜಿಟಲ್ ಆಗಿಸುವುದು ಇಲ್ಲಿನ ಶಾಲೆಗಳ ಹೊಸ ಟ್ರೆಂಡ್.
ಶಾಲೆಗಳು ಕಲಿಕೆಯ ನವೀನ ಮಾರ್ಗಗಳ ಬಗ್ಗೆ ಪ್ರಯೋಗಗಳನ್ನು ಮಾಡುತ್ತಿದ್ದು, ಇದರಿಂದ ಮಕ್ಕಳು ಕಿಂಡರ್ಗಾರ್ಟ್ನ್ ಅಥವಾ ಕಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲೇ ತಂತ್ರಜ್ಞಾನ ಪರಿಚಿತರಾಗುತ್ತಾರೆ.
ಇದು ವರ್ಣರಂಜಿತ ಹಾಗೂ ಪರಿಣಾಮಕಾರಿಯಾಗಿದೆ. ವೀಡಿಯೋಗಳ ಮೂಲಕ ಮಕ್ಕಳು ರೈಮ್ಸ್ಗಳನ್ನು ನೋಡುವುದು, ಸ್ಮಾರ್ಟ್ ಬೋರ್ಡ್ಗಳ ಸಹಾಯದಿಂದ ಬಣ್ಣಗಳನ್ನು ಗುರುತಿಸುವುದು, ವರ್ಣಮಾಲೆಗಳನ್ನು ಕಲಿಯಲು ಹೆಚ್ಚು ಉಪಯುಕ್ತವಾಗಿದೆ ಎಂದು ವಿಜಯನಗರದ ಅಪಲ್ ಕಿಡ್ಸ್ ಇಂಟರ್ನ್ಯಾಷನಲ್ ಪ್ರೀ ಸ್ಕೂಲ್ನ ಪ್ರಾಂಶುಪಾಲರಾದ ಶ್ಯಾಮಲಾ ರಮೇಶ್ ಹೇಳಿದ್ದಾರೆ.
ಹಲವಾರು ಸಂಸ್ಥೆಗಳು ಪ್ರತ್ಯೇಕವಾಗಿ ಡಿಜಿಟಲ್ ಕಲಿಕಾ ವಸ್ತುಗಳ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿವೆ. ಶಾಲೆಗಳು ಹೆಚ್ಚಿನ ಮಟ್ಟದಲ್ಲಿ ಕಲಿಕೆ ಮತ್ತು ಬೋಧನೆಯ ಗುಣಮಟ್ಟವನ್ನು ಸುಧಾರಿಸಲು ಸಾಫ್ಟ್ವೇರ್ಗಳನ್ನು ಪಡೆಯುತ್ತಿದ್ದಾರೆ.
ಪಠ್ಯಪುಸ್ತಕಗಳಲ್ಲಿ ಚಿತ್ರಗಳು ಸ್ಥಿರವಾಗಿರುತ್ತವೆ. ಆದರೆ ಡಿಜಿಟಲ್ ರೂಪದಲ್ಲಿರುವ ಚಿತ್ರ ಆಚೆ-ಇಚೆ ಚಲಿಸುವಂತೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಇದರಿಂದ ಆಕರ್ಷಿತರಾಗಿ ಕಲಿಕೆಯಲ್ಲಿ ಆಸಕ್ತಿ ತೋರುತ್ತಾರೆ ಎಂದು ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ನ ಪ್ರಾಂಶುಪಾಲರಾದ ತಸ್ನೀಮ್ ಖಾನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.