ನವದೆಹಲಿ: ಪ್ರಧಾನಿ ಮೋದಿ ಅವರು 2014 ರಲ್ಲಿ ಆರಂಭಿಸಿದ ಮಾಸಿಕ ಮನ್ ಕೀ ಬಾತ್ ಕಾರ್ಯಕ್ರಮ ಈ ವರೆಗೆ 30.80 ಕೋಟಿ ರೂ. ಗಳಿಗೂ ಹೆಚ್ಚು ಆದಾಯ ಗಳಿಸಿದೆ.
ಈ ಸಂಬಂಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ವರದಿ ನೀಡಿದ್ದು, 2017 – 18 ನೇ ಸಾಲಿನಲ್ಲಿ ಈ ಕಾರ್ಯಕ್ರಮದ ಮುಖೇನ 10.64 ಕೋಟಿ ರೂ. ಆದಾಯ ಗಳಿಸಿದೆ ಎಂದು ಹೇಳಿದ್ದಾರೆ. ತಿಂಗಳ ಕೊನೆಯ ರವಿವಾರ ಪೂರ್ವಾಹ್ನ 11 ಗಂಟೆಗೆ ಆಲ್ ಇಂಡಿಯಾ ರೇಡಿಯೋದ ಎಲ್ಲಾ ಚಾನೆಲ್ಗಳು, ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ.
ಈ ವರೆಗೆ ಒಟ್ಟು 78 ಎಪಿಸೋಡ್ಗಳು ಪ್ರಸಾರವಾಗಿದೆ. ಕಾರ್ಯಕ್ರಮ 91 ಖಾಸಗಿ ಸ್ಯಾಟಲೈಟ್ ಟಿವಿ ಚಾನೆಲ್ಗಳಲ್ಲಿಯೂ ಪ್ರಸಾರವಾಗುತ್ತಿದೆ. 2014-15 ರಲ್ಲಿ 1.16 ಕೋಟಿ, 2015 -16 ರಲ್ಲಿ 2.81 ಕೋಟಿ, 2016-17 ರಲ್ಲಿ 5.14 ಕೋಟಿ, 2017-18 ರಲ್ಲಿ 10.64 ಕೋಟಿ, 2018-19 ರಲ್ಲಿ 7.47 ಕೋಟಿ, 2019-20 ರಲ್ಲಿ 2.56 ಕೋಟಿ, 2020-21 ರಲ್ಲಿ 1.02 ಕೋಟಿ ರೂ. ಆದಾಯ ಗಳಿಸಿದೆ.
ರೇಡಿಯೋ ಮೂಲಕ ದೇಶದ ಎಲ್ಲಾ ಜನರನ್ನೂ ತಲುಪುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ಜನರಿಗೆ ಸಂಪರ್ಕ ಸಾಧಿಸಲು, ಸಲಹೆ ನೀಡುವ ನಿಟ್ಟಿನಲ್ಲಿಯೂ ಇದರಲ್ಲಿ ಅವಕಾಶ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.