ಇಂಧೋರ್: ಅವಿವಾಹಿತರಿಗಿಂತ ಮದುವೆಯ ಬಂಧನಕ್ಕೆ ಒಳಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ವರದಿಯಿಂದ ಬಹಿರಂಗವಾಗಿದೆ.
2014ರಲ್ಲಿ ದೇಶದಲ್ಲಿ ಒಟ್ಟು 1,31,666 ಆತ್ಮಹತ್ಯಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಶೇ.65.9ರಷ್ಟು ರಷ್ಟು ಮಂದಿ ವಿವಾಹಿತರು ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಬಿಡುಗಡೆ ಮಾಡಿರುವ ವರದಿ ‘ಅಕ್ಸಿಡೆಂಟಲ್ ಡೆತ್ಸ್ ಆಂಡ್ ಸುಸೈಡ್ಸ್ ಇನ್ ಇಂಡಿಯಾ’ದಿಂದ ತಿಳಿದು ಬಂದಿದೆ.
ಕೇವಲ 21.1ರಷ್ಟು ಆತ್ಮಹತ್ಯೆ ಮಾಡಿಕೊಂಡರು ಅವಿವಾಹಿತರಾಗಿದ್ದಾರೆ. ವಿಚ್ಛೇಧನ ಪಡೆದುಕೊಂಡವರು ಮತ್ತು ಸಂಗಾತಿಯಿಂದ ದೂರವಾದ ಶೇ.1.4ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇ. 2.1ರಷ್ಟು ವಿಧವೆ ಅಥವಾ ವಿಧುರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬದಲಾಗುತ್ತಿರುವ ಕುಟುಂಬ ವ್ಯವಸ್ಥೆ, ಕುಟುಂಬ ಸದಸ್ಯರ ನಡುವಣ ಬಾಂಧವ್ಯದ ಕೊರತೆ, ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದತ್ತ ಹೆಚ್ಚಿದ ಒಲವು ಹೆಚ್ಚಿನ ಪ್ರಮಾಣದಲ್ಲಿ ವಿವಾಹಿತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಮನಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪತಿ ಪತ್ನಿಯರು ತಮ್ಮ ವ್ಯವಹಾರಿಕ ಬದುಕು ಮತ್ತು ವೈಯಕ್ತಿಕ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳದೇ ಇರುವುದು ಕೂಡ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.