ತಿರುವನಂತಪುರ: ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯುವ ಮುನ್ನ ನಾವು ವರದಕ್ಷಿಣೆ ನೀಡುವುದಿಲ್ಲ ಮತ್ತು ಪಡೆಯುವುದಿಲ್ಲ ಎಂಬ ಕರಾರುಪತ್ರಕ್ಕೆ ಸಹಿ ಮಾಡುವಂತೆ ಆಗಬೇಕು ಎಂದು ಎಲ್ಲಾ ವಿವಿಗಳ ಉಪಕುಲಪತಿಗಳಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳ ದಾಖಲಾತಿ ಸಂದರ್ಭದಲ್ಲಿ ಮಾತ್ರವಲ್ಲದೆ, ಅವರಿಗೆ ಪದವಿ ಪ್ರಮಾಣ ಪತ್ರಗಳನ್ನು ನೀಡುವ ಸಂದರ್ಭದಲ್ಲಿಯೂ ವರದಕ್ಷಿಣೆ ಕರಾರುಪತ್ರಕ್ಕೆ ಸಹಿ ಹಾಕುವಂತೆ ಮಾಡಬೇಕು. ಹಾಗೆಯೇ ವಿವಿಯಲ್ಲಿ ನೇಮಕವಾಗುವ ಪ್ರತಿಯೊಬ್ಬರಿಗೂ ಈ ಕರಾರುಪತ್ರಕ್ಕೆ ಸಹಿ ಮಾಡಲು ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಸಹಿ ಮಾಡುವ ಪ್ರಕ್ರಿಯೆ ಕೇವಲ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗದೆ, ಸಿಬ್ಬಂದಿಗಳಿಗೂ ಅನ್ವಯವಾಗಬೇಕು. ಮದುವೆಯ ವಿಚಾರದಲ್ಲಿ ವಧು ವರರ ಬೆಲೆ ಹೆಚ್ಚಿಸಲು ಪದವಿ ಪ್ರಮಾಣ ಪತ್ರಗಳು ನೆರವಾಗುವುದಕ್ಕೆ ವಿವಿಗಳು ಅನುಮತಿಸಬಾರದು. ಇದು ಕೇವಲ ಮಹಿಳಾ ವಿಚಾರವಲ್ಲ. ಮನುಕುಲದ ವಿಚಾರವಾಗಿದ್ದು, ಮಹಿಳೆಯರನ್ನು ಕುಗ್ಗಿಸುವ ಕೆಲಸ ಆಗಬಾರದು. ವರದಕ್ಷಿಣೆಗಾಗಿ ಬೇಡಿಕೆ ಇಡುವುದು ಮಹಿಳೆಯರು ಮತ್ತು ಮನುಕುಲದ ಘನತೆಗೆ ತಕ್ಕ ನಡೆಯಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.