ನವದೆಹಲಿ: ಬಾಯಿ ಮಾತಿನ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳಿ ವಿಚ್ಛೇಧನ ನೀಡುವ ಮತ್ತು ಬಹುಪತ್ವಿತ್ವ ಪದ್ಧತಿಗೆ ಬಹುತೇಕ ಮುಸ್ಲಿಂ ಮಹಿಳೆಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬಾಯಿ ಮಾತಿನ, ಏಕಪಕ್ಷೀಯ ಮತ್ತು ಮೂರು ಬಾರಿ ತಲಾಖ್ ಹೇಳುವ ವಿಚ್ಛೇಧನಕ್ಕೆ ನಿಷೇಧ ಹೇರಬೇಕು ಎಂದು ಭಾರತದ ಶೇ.92.1ರಷ್ಟು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಒಟ್ಟು 4710 ಮಹಿಳೆಯರನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಇವರಲ್ಲಿ 4,320 ಮಹಿಳೆಯರು ಬಹುಪತ್ವಿತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಪುರುಷನಿಗೆ ಒಂದೇ ಬಾರಿ ಎರಡು ಮೂರು ಪತ್ನಿಯರನ್ನು ಹೊಂದುವ ಅವಕಾಶ ನೀಡಬಾರದು ಎಂದು ಇವರು ಅಭಿಪ್ರಾಯಿಸಿದ್ದಾರೆ.
ಪಶ್ಚಿಮಬಂಗಾಳ, ಮಹಾರಾಷ್ಟ್ರ, ಬಿಹಾರ್ ಮತ್ತು ಜಾರ್ಖಾಂಡ್ ಸೇರಿದಂತೆ ಒಟ್ಟು 10 ರಾಜ್ಯಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸೋಶಲ್ ನೆಟ್ವರ್ಕಿಂಗ್ ಸೈಟ್ಗಳಾದ ಸ್ಕೈಪೆ, ಟೆಕ್ಸ್ಟ್ ಮೆಸೇಜ್, ಇಮೇಲ್, ವಾಟ್ಸ್ಆಪ್ಗಳಲ್ಲೂ ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ವಿಚ್ಛೇಧನಗಳನ್ನು ನೀಡುತ್ತಿದ್ದಾರೆ. ಈ ರೀತಿಯ ವಿಚ್ಛೇಧನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಮಹಿಳೆಯರನ್ನು ಆತಂಕಕ್ಕೆ ದೂಡಿದೆ.
ಬಾಯಿಮಾತಿನ ತಲಾಖ್ ನೋಟಿಸ್ ನೀಡುವ ಧರ್ಮಗುರುಗಳ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂಬುದಾಗಿ ಸಮೀಕ್ಷೆಗೊಳಪಟ್ಟ ಶೇ.85ರಷ್ಟು ಮಹಿಳೆಯರು ಹೇಳಿದ್ದಾರೆ.
ನೂರ್ಜಹಾನ್ ಸಫೀಯಾ ನಿಯಾಝ್ ಮತ್ತು ಝಾಕಿಯ ಸೋಮನ್ ಎಂಬುವವರು ಈ ಸಮೀಕ್ಷೆಯನ್ನು ನಡೆಸಿದ್ದು, ಮುಸ್ಲಿಂ ಮಹಿಳೆಯರಿಗೆ ಧ್ವನಿ ನೀಡುವುದು ಇವರ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.