ನವದೆಹಲಿ: 2013ರಲ್ಲಿ ಅಲಹಾಬಾದ್ನಲ್ಲಿ ನಡೆದ ಕುಂಭಮೇಳವನ್ನು ಫಿಫಾ ವರ್ಲ್ಡ್ ಕಪ್ಗಿಂತಲೂ ಚೆನ್ನಾಗಿ ಅಯೋಜನೆ ಮಾಡಲಾಗಿತ್ತು ಎಂಬುದನ್ನು ಹಾರ್ವ್ರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ತಿಳಿಸಿದ್ದಾರೆ.
ಇವರು ಬರೆದ ‘ಕುಂಭಮೇಳ-ಮ್ಯಾಪಿಂಗ್ ದಿ ಎಫರ್ಮಲ್ ಮೆಗಾ-ಸಿಟಿ’ ಪುಸ್ತಕವನ್ನು ಇತ್ತೀಚಿಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಡುಗಡೆ ಮಾಡಿದ್ದರು. ಇವರ ಸರ್ಕಾರದ ನೇತೃತ್ವದಲ್ಲಿ 2013ರ ಜನವರಿ-ಫೆಬ್ರವರಿಯಲ್ಲಿ 55 ದಿನಗಳ ಕುಂಭಮೇಳವನ್ನು ಆಯೋಜನೆಗೊಳಿಸಲಾಗಿತ್ತು.
447 ಪುಟಗಳ ಪುಸ್ತಕ ಇದಾಗಿದ್ದು,24 ಸ್ಕ್ವಾರ್ ಕಿ.ಮೀ ಕುಂಭನಗರದಲ್ಲಿ ಸಂಕೀರ್ಣ ಮತ್ತು ತಾತ್ಕಲಿಕ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದ್ದು ಮಾನವ ಸಾಧನೆಯೇ ಸರಿ ಎಂದು ವಿಶ್ಲೇಷಿಸಲಾಗಿದೆ.
100 ಮಿಲಿಯನ್ ಜನ 55 ದಿನಗಳಲ್ಲಿ ಈ ಪುಟ್ಟ ನಗರಕ್ಕೆ ಆಗಮಿಸಿದ್ದಾರೆ, ಪ್ರತಿನಿತ್ಯ ಇಲ್ಲಿ 5 ಮಿಲಿಯನ್ ಜನಸ್ತೋಮವಿತ್ತು. ಜನ ಗಂಗೆ, ಯಮುನೆ, ಸರಸ್ವತಿಯಲ್ಲಿ ಸ್ನಾನ ಮಾಡಿದ್ದು, ಸಾಧುಗಳ ಸಭೆ, ಪ್ರಾರ್ಥನೆ, ಪೂಜೆ, ಗುರುಗಳ ಭೇಟಿ, ಜನ ತಮ್ಮ ಊರಿಗೆ ವಾಪಾಸ್ ಹೋಗಿದ್ದು ಇವೆಲ್ಲವೂ ಅಧ್ಯಯನಕ್ಕೆ ಯೋಗ್ಯ ವಿಷಯಗಳು ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.