ನವದೆಹಲಿ: ಜಮಾತ್- ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ನ ಮನವಿ ಮೇರೆಗೆ ಲಾಹೋರ್ ಹೈಕೋರ್ಟ್ ಪಾಕಿಸ್ಥಾನದಲ್ಲಿ ಬಾಲಿವುಡ್ ಚಿತ್ರ ’ಫಾಂಥಮ್’ಗೆ ನಿರ್ಬಂಧ ಹೇರಿದೆ.
ನಟ ಸೈಫ್ ಅಲಿ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಈ ಚಿತ್ರ ನನ್ನ ಮತ್ತು ನನ್ನ ತಂಡದ ವಿರುದ್ಧ ಅಪಪ್ರಚಾರದ ಹೇಳಿಕೆಯನ್ನು ಹೊಂದಿದೆ ಎಂದು ಸಯೀದ್ ದೂರಿದ್ದಾನೆ.
ಲಾಹೋರ್ ಹೈಕೋರ್ಟ್ ನ್ಯಾಯಾಧೀಶ ಶಾಹಿದ್ ಬಿಲಾಲ್ ಹಸನ್ ಅವರು ಪಾಕ್ನ ಯಾವುದೇ ಚಿತ್ರ ಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಗೊಳಿಸದಂತೆ ಆದೇಶ ಹೊರಡಿಸಿದ್ದಾರೆ.
ಈ ಸಿನೆಮಾ ಸಯೀದ್ಗೆ ಅಪಾಯ ತಂದಿದೆ ಎಂದು ಸಯೀದ್ ಪರ ವಕೀಲ ಎ.ಕೆ. ದೋಗಾರ್ ಹೇಳಿದ್ದಾರೆ. ಭಾರತೀಯ ನಟ, ನಟಿಯರ ಸಿನೆಮಾ ಡೈಲಾಗ್ಗಳು ಪಾಕಿಸ್ಥಾನದ ಜನತೆಯ ಮನಸ್ಸನ್ನು ವಿಷವಾಗಿ ಪರಿವರ್ತಿಸಬಹುದು. ಈ ಘೋರ ಪರಿಣಾಮದಿಂದ ಜಮಾತ್-ಉತ್-ದಾವಾ ಒಂದು ನಿಷೇಧಿತ ಸಂಘಟನೆ ಎಂದು ಘೋಷಣೆ ಆಗದಿದ್ದರೂ ಸಯೀದ್ ಒಬ್ಬ ಭಯೋತ್ಪಾದಕ ಎಂದು ಹೊರಹೊಮ್ಮುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಮಧ್ಯೆ ಚಿತ್ರ ನಿರ್ಮಾಪಕ ಕಬೀರ್ ಖಾನ್ ಅವರು ಹಫೀಜ್ನಂತಹವರು ನ್ಯಾಯಾಲಯದ ಮೆಟ್ಟಿಲೇರುತ್ತಿರುವುದು ವಿಷಾದದ ಸಂಗತಿ. ಇದು ತನ್ನ ಚಿತ್ರದ ವಿರುದ್ಧ ದ್ವೇಷ ಹರಡಿಸುವಂತೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.