ನವದೆಹಲಿ: ಮಹತ್ವದ ಅಟಲ್ ಪೆನ್ಷನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರನ್ನೂ ತಲುಪಲಿ ಎಂಬ ಉದ್ದೇಶದಿಂದ ಸರ್ಕಾರವೂ ಈ ಯೋಜನೆಯ ಚಂದಾದಾರರಿಗೆ ಮಾಸಿಕ, ತ್ರೈಮಾಸಿಕ, ಅರ್ಧ ಮಾಸಿಕ ಆಧಾರದಲ್ಲಿ ಕಂತುಗಳನ್ನು ಕಟ್ಟುವ ಅವಕಾಶವನ್ನು ನೀಡಿದೆ.
ಅನೌಪಚಾರಿಕ ವಲಯದ ಕಾರ್ಮಿಕರೂ ಈ ಯೋಜನೆಯನ್ನು ಅಳವಡಿಕೊಳ್ಳಲಿ ಎಂಬ ಕಾರಣಕ್ಕೆ ಈ ಬದಲಾವಣೆಯನ್ನು ತರಲಾಗಿದೆ.
ಅಟಲ್ ಪೆನ್ಷನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು 2015ರ ಮೇ 9ರಂದು ಕೋಲ್ಕತ್ತಾದಲ್ಲಿ ಚಾಲನೆ ನೀಡಿದ್ದರು. ಈ ಯೋಜನೆಯಡಿ 18-40 ವರ್ಷದೊಳಗಿನವರು ಯೋಜನೆಯನ್ವಯ ಹಣ ಕಟ್ಟಿದರೆ 60 ವರ್ಷ ದಾಟಿದ ಬಳಿಕ 1 ಸಾವಿರದಿಂದ 5 ಸಾವಿರದವರೆಗೆ ಪೆನ್ಷನ್ ಪಡೆಯುತ್ತಾರೆ. ಅವರು ಕಟ್ಟಿದ ಹಣದ ಆಧಾರದಲ್ಲಿ ಅವರಿಗೆ ಪೆನ್ಷನ್ ನೀಡಲಾಗುತ್ತದೆ.
ಪ್ರತಿ ತಿಂಗಳು ಹಣ ಕಟ್ಟಲು ಕಷ್ಟವಾದರೆ ಎಂಬ ಕಾರಣಕ್ಕೆ ಇದೀಗ ಯೋಜನೆಯಲ್ಲಿ ಬದಲಾವಣೆಯನ್ನು ತಂದು ಮಾಸಿಕ, ತ್ರೈಮಾಸಿಕ, ಅರ್ಧ ಮಾಸಿಕವಾಗಿ ಹಣವನ್ನು ಕಟ್ಟಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.