ಬೆಂಗಳೂರು: ರಾಜ್ಯದಲ್ಲಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ಒದಗಿಸುವುದಕ್ಕೆ ಸಂಬಂಧಿಸಿದಂತೆ ‘ಟೆಲಿಗ್ರಾಮ್ ಚಾನೆಲ್’ ಒಂದನ್ನು ಹೈಕೋರ್ಟ್ ಆರಂಭ ಮಾಡಿದೆ.
ಇದನ್ನು ಹೈಕೋರ್ಟ್ ವರ್ಚುವಲ್ ಕೇಸ್ ಇನ್ಫಾರ್ಮೇಶನ್ ಸರ್ವೀಸ್ ಎಂಬ ಹೆಸರಿನಲ್ಲಿ HCKChatBot ಅಭಿವೃದ್ಧಿ ಮಾಡಲಾಗಿದೆ. ಈ ಚಾನೆಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಒಕಾ ಅವರು ಉದ್ಘಾಟನೆ ಮಾಡಿದ್ದಾರೆ.
ಹೈಕೋರ್ಟ್ ಚಾನೆಲ್ ಅನ್ನು ಈಗಾಗಲೇ 65 ಸಾವಿರಕ್ಕೂ ಅಧಿಕ ಜನರು ಸಬ್ಸ್ಕ್ರೈಬ್ ಮಾಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಜನರು ಜಿಲ್ಲಾ ನ್ಯಾಯಾಲಯಗಳ ಚಾನೆಲ್ಗೆ ಸಬ್ಸ್ಕ್ರೈಬ್ ಆಗಿದ್ದಾರೆ. ಈ ಸೇವೆ ಮೂಲಕ ಎಲ್ಲಾ ವಿಚಾರಣೆಗಳನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ಇ-ನ್ಯಾಯಾಲಯದ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆಯ ಸ್ಥಿತಿ, ದೈನಂದಿನ ಆದೇಶ ಮೊದಲಾದವುಗಳನ್ನು ಈ ಚಾನೆಲ್ನಲ್ಲಿ ನೋಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.