ಬೆಂಗಳೂರು: ಡಿಜಿಟಲ್ ಕ್ರಾಂತಿಯ ಪರಿಣಾಮ ಎಂಬಂತೆ, ವಾಹನ ಸವಾರರಿಗೆ ಡಿಜಿಟಲ್ ರೂಪದಲ್ಲಿ ತಮ್ಮ ವಾಹನಗಳ ದಾಖಲಾತಿಯನ್ನು ಪ್ರಯಾಣದ ವೇಳೆ ಹಾಜರುಪಡಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಪೊಲೀಸರ ತಪಾಸಣೆ ಸಂದರ್ಭದಲ್ಲಿ ವಾಹನ ಸವಾರರು ಡಿಜಿಟಲ್ ದಾಖಲೆಗಳನ್ನೇ ಪ್ರದರ್ಶಿಸಲು ಅವಕಾಶ ನೀಡಿರುವುದಾಗಿ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ಬಿ. ಆರ್. ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.
ಡಿಜಿ ಲಾಕರ್ ಅಥವಾ ಎಂಪರಿ ವಾಹನ್ ಅಪ್ಲಿಕೇಶನ್ಗಳ ಮೂಲಕ ಸಂಚಾರಕ್ಕೆ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ತಪಾಸಣೆ ವೇಳೆ ತೋರಿಸಬಹುದಾಗಿದೆ. ಅಧಿಕಾರಿಗಳು ಸಹ ಅದನ್ನು ಸ್ಕ್ಯಾನ್ ಮಾಡಿ ಅಧಿಕೃತ ಎಂದು ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. ಈ ಎರಡು ಅಪ್ಲಿಕೇಶನ್ಗಳಲ್ಲಿ ಡಿಜಿಟಲ್ ರೂಪದಲ್ಲಿರುವ ದಾಖಲೆಗಳನ್ನು ಸ್ವೀಕಾರ ಮಾಡಬಹುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಸಹ ಸ್ಪಷ್ಟಪಡಿಸಿವೆ.
ಇದರಿಂದ ನಕಲಿ ದಾಖಲೆಗಳ ಹಾವಳಿ ತಪ್ಪಿಸಲು ಸಾಧ್ಯವಿದೆ. ಅಸಲಿ ದಾಖಲೆಗಳು ಕಳೆದು ಹೋಗುವ ಭಯವೂ ಇಲ್ಲ. ಪೊಲೀಸ್ ಸಿಬ್ಬಂದಿಗಳಿಗೂ ಈ ವ್ಯವಸ್ಥೆ ಅನುಕೂಲಕಾರಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.