ಕಲ್ಬುರ್ಗಿ: ನಗರದಲ್ಲಿ ವಿಮಾನ ಹಾರಾಟ ತರಬೇತಿಯನ್ನು ಆರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಇಂದು ಎರಡು ಅಕಾಡೆಮಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕಲ್ಬುರ್ಗಿ ವಿಮಾನ ನಿಲ್ದಾಣವು, ಹೈದರಾಬಾದ್ ಏಷ್ಯಾ ಪೆಸಿಫಿಕ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ, ನವದೆಹಲಿಯ ರೆಡ್ ಬರ್ಡ್ ಏವಿಯೇಷನ್ ಅಕಾಡೆಮಿಯ ಜೊತೆಗೆ ಈ ಒಪ್ಪಂದ ಮಾಡಿಕೊಂಡಿದೆ.
ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ್ ರಾವ್ ಅವರು ಇಂದು ಈ ಒಪ್ಪಂದಕ್ಕೆ ಅಕಾಡೆಮಿಗಳ ಜೊತೆಗೆ ಸಹಿ ಮಾಡಿದ್ದಾರೆ. ಈ ಒಪ್ಪಂದದ ಅನ್ವಯ ವಿಮಾನ ನಿಲ್ದಾಣದ ಒಳಗೆ ವಿಮಾನ ಹಾರಾಟ ತರಬೇತಿ ಅಕಾಡೆಮಿಗಳು ತಲೆ ಎತ್ತಲಿವೆ. ಈ ಹಿನ್ನೆಲೆಯಲ್ಲಿ ಈ ಎರಡೂ ಅಕಾಡೆಮಿಗಳಿಗೆ ತಲಾ ಐದು ಚದರ ಮೀಟರ್ ಭೂ ಹಂಚಿಕೆ ಮಾಡಲಾಗಿದೆ.
ಕಲ್ಬುರ್ಗಿಯಲ್ಲಿ ಮುಂದಿನ ವರ್ಷದಿಂದ ವಿಮಾನ ಹಾರಾಟ ತರಬೇತಿ ಆರಂಭವಾಗುವ ನಿರೀಕ್ಷೆ ಇದೆ. ಮುಂದಿನ 30 ವರ್ಷಗಳಿಗೆ ಸಂಬಂಧಿಸಿದಂತೆ ಈ ಒಪ್ಪಂದ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.