ನವದೆಹಲಿ: ವಿಮಾನಯಾನ ಸಂಸ್ಥೆಗಳು ಈ ಹಿಂದಿನ ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು 50% ದಿಂದ ಗರಿಷ್ಠ 65% ವರೆಗಿನ ಆಸನ ಸಾಮರ್ಥ್ಯದ ಜೊತೆಗೆ ದೇಶೀಯ ವಿಮಾನಯಾನ ಸೇವೆಯನ್ನು ಆರಂಭಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಸಚಿವಾಲಯ ಈ ಹಿಂದೆ ನೀಡಿದ್ದ ಆದೇಶದ ಅನ್ವಯ ಕಳೆದ ಜೂ. 1 ರಿಂದ 50% ಆಸನಗಳನ್ನು ಬಳಕೆ ಮಾಡಿ ಸೇವೆ ನೀಡುವಂತೆ ಸೂಚಿಸಲಾಗಿತ್ತು. ಇದೀಗ 65% ಗರಿಷ್ಠ ಮಿತಿಯ ಜೊತೆಗೆ ಸೇವೆ ನೀಡಬಹುದು ಎಂದು ವಿಮಾನಯಾನ ಸಚಿವಾಲಯ ಹೇಳಿದೆ.
ಕೊರೋನಾ ಎರಡನೇ ಅಲೆಯ ಆರ್ಭಟ ದೇಶವನ್ನು ಕಂಗೆಡಿಸಿದ್ದ ಹಿನ್ನೆಲೆಯಲ್ಲಿ ಈ ಹಿಂದೆ 80% ಗರಿಷ್ಠ ಮಿತಿಯಲ್ಲಿ ಸೇವೆ ನೀಡುತ್ತಿದ್ದ ವಿಮಾನಯಾನ ಸಂಸ್ಥೆಗಳು, ಕೊರೋನಾ ಬಳಿಕ ಸಚಿವಾಲಯದ ಆದೇಶದನ್ವಯ ಈ ವರೆಗೆ 50% ಮಿತಿಯಲ್ಲಿ ಸೇವೆ ನೀಡುತ್ತಿತ್ತು. ಆದರೆ ಇದೀಗ ಆ ಮಿತಿಯಲ್ಲಿ 15% ಏರಿಕೆ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.