ರಾಯ್ಪರ: ವಾತಾವರಣವನ್ನು ಹಸಿರಾಗಿಸಲು ‘ಗೋ ಗ್ರೀನ್’ ಹೆಸರಿನಡಿ ದೇಶದಲ್ಲಿ ಹಲವಾರು ಯೋಜನೆ, ಅಭಿಯಾನಗಳನ್ನು ಆರಂಭಿಸಲಾಗಿದೆ. ಛತ್ತೀಸ್ಗಢ ಸರ್ಕಾರವೂ ಗೋ ಗ್ರೀನ್ ಅಭಿಯಾನ ಆರಂಭಿಸಿದೆ. ಆದರೆ ಗಿಡಮರಗಳನ್ನು ನೆಟ್ಟಲ್ಲ, ಹಸಿರು ಬಣ್ಣದ ಪ್ಲಾಸ್ಟಿಕ್ ಮರಗಳನ್ನು ನೆಟ್ಟು!
ನಗರವನ್ನು ಸುಂದರೀಕರಣಗೊಳಿಸುವ ಸಲುವಾಗಿ ಪ್ಲಾಸ್ಟಿಕ್ ಚೆರ್ರಿ ಗಿಡಗಳನ್ನು ರಾಜಕಾರಣಿಗ, ಅಧಿಕಾರಿಗಳ ಬಂಗಲೆಯ ಮುಂದೆ, ಸರ್ಕಾರ ಅಲ್ಲಲ್ಲಿ ನೆಟ್ಟಿದೆ. ಇವುಗಳ ಮೇಲೆ ವಿದ್ಯುತ್ ದೀಪಗಳನ್ನು ಹಾಕಿ ಆಕರ್ಷಣೀಯಗೊಳಿಸಲಾಗಿದೆ. ಇದರಿಂದ ಪರಿಸರಕ್ಕೆ ಯಾವುದೇ ಪ್ರಯೋಜನಗಳಿಲ್ಲದಿದ್ದರೂ ಇದಕ್ಕಾಗಿ ಕೋಟ್ಯಾಂತರ ಹಣವನ್ನು ಖರ್ಚು ಮಾಡಿದೆ.
ಉತ್ತಮ ಗಾಳಿ ನೀಡುವ, ಪರಿಸರವನ್ನು ಉತ್ತಮವಾಗಿಡುವ ಹಚ್ಚಹಸಿರಿನ ಗಿಡ ಮರಗಳನ್ನು ನೆಡಬೇಕಾದ ಸರ್ಕಾರ ಈ ರೀತಿ ಪ್ಲಾಸ್ಟಿಕ್ ಮರಗಳನ್ನು ನೆಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.