ಹುಬ್ಬಳ್ಳಿ: ಹುಬ್ಬಳ್ಳಿ – ವಾಸ್ಕೋ ರೈಲಿಗೆ ಗ್ಲಾಸ್ ಟಾಪ್ ವಿಸ್ಟಾಡೋಮ್ ಹವಾನಿಯಂತ್ರಿತ ಕೋಚ್ಗಳನ್ನು ಅಳವಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ನಗರದಿಂದ ವಾಸ್ಕೋಗೆ ಐದರಿಂದ ಆರು ಗಂಟೆಗಳ ಪ್ರಯಾಣವಾಗಿದ್ದು, ಈ ನಡುವೆ ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯ ಸವಿಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆ ಈ ಮಹತ್ವದ ನಿರ್ಣಯ ಕೈಗೊಂಡಿದೆ. ಪ್ರಸಿದ್ಧ ದೂದ್ ಸಾಗರ್ ಜಲಪಾತ ಸೇರಿದಂತೆ ಇನ್ನಿತರ ಸುಂದರ ಪ್ರದೇಶಗಳನ್ನು ಕಣ್ತುಂಬಿಕೊಳ್ಳಲು ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.
ಈ ರೈಲು ಮಾರ್ಗ ಹಲವು ಸುರಂಗಗಳನ್ನು ಹಾದು ಹೋಗಬೇಕಿದ್ದು, ಪಶ್ಚಿಮ ಘಟ್ಟದ ಸೊಬಗು, ನದಿ ಸೇರಿದಂತೆ ಇನ್ನಿತರ ಮನಮೋಹಕ ತಾಣಗಳನ್ನು ದಾಟಿ ಈ ವಿಸ್ಟಾಡೋಮ್ ಬೋಗಿಗಳುಳ್ಳ ರೈಲು ಸಂಚರಿಸಲಿವೆ. ಮಾನ್ಸೂನ್ ಸಂದರ್ಭದಲ್ಲಿ ಈ ರೈಲು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಲಿದೆ. ಉತ್ತಮ ಆದಾಯ ಗಳಿಕೆಗೂ ಇದು ಪೂರಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.