ನವದೆಹಲಿ: ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಒಂಬತ್ತು ಯುರೋಪಿಯನ್ ರಾಷ್ಟ್ರಗಳು ತಮ್ಮ ಪ್ರಯಾಣದ ರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಕೂಡ ಪಟ್ಟಿ ಮಾಡಿವೆ.
ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿಸಿದ ದೇಶಗಳಲ್ಲಿ ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಎಸ್ಟೋನಿಯಾ, ಐರ್ಲೆಂಡ್, ಸ್ಪೇನ್ ಮತ್ತು ಎಸ್ಟೋನಿಯಾ ಸೇರಿವೆ.
ಮುಖ್ಯವಾಗಿ, ಎಸ್ಟೋನಿಯಾದ ದೃಢಪಡಿಸಿದ ಮೂಲಗಳ ಪ್ರಕಾರ, ಅದು ಭಾರತ ಸರ್ಕಾರವು ಅನುಮೋದಿಸಿರುವ ಎಲ್ಲಾ ಲಸಿಕೆಗಳನ್ನು ಪಟ್ಟಿ ಮಾಡಿದೆ. ಹೀಗಾಗಿ ಯಾವುದೇ ಲಸಿಕೆ ಪಡೆದ ಭಾರತೀಯರು ಅಲ್ಲಿಗೆ ಪ್ರಯಾಣಿಸಬಹುದು. ಅಂದರೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ಹಾಕಿದ ವ್ಯಕ್ತಿಗಳಿಗೂ ಸ್ಪುಟ್ನಿಕ್ ಮತ್ತು ಮಾಡೆರ್ನಾ ಹಾಕಿದವರ ಜೊತೆಗೆ ದೇಶದಲ್ಲಿ ಪ್ರಯಾಣಿಸಲು ಅವಕಾಶವಿದೆ.
ಉತ್ತರ ಯುರೋಪಿನ ಎಸ್ಟೋನಿಯಾ ಭಾರತ ನಿರ್ಮಿತ ಎರಡೂ ಲಸಿಕೆಗಳನ್ನು ಪಟ್ಟಿ ಮಾಡಿದ ಮೊದಲ ಇಯು ಸದಸ್ಯ ರಾಷ್ಟ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.