ಶ್ರೀನಗರ: ಪಾಕ್-ಭಾರತದ ನಡುವಣ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಗೂ ಮುನ್ನ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದ ಪ್ರತ್ಯೇಕತಾವಾದಿಗಳನ್ನು ಬಂಧಿಸಿ ಇದೀಗ ಬಿಡುಗಡೆ ಮಾಡಲಾಗಿದೆ.
ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರನ್ನು ಹೊರತುಪಡಿಸಿ ಇತರ ಇಬ್ಬರನ್ನು ಬಂಧಿಸಿ ಎರಡು ಗಂಟೆಗಳ ಬಳಿಕ ಜಮ್ಮು ಕಾಶ್ಮೀರ ಸರ್ಕಾರ ಬಿಡುಗಡೆ ಮಾಡಿದೆ.
ಪಾಕ್ ರಕ್ಷಣಾ ಸಲಹೆಗಾರ ಸತ್ರಾಝ್ ಅಜೀಝ್ ಮತ್ತು ಭಾರತೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರ ನಡುವೆ ಮುಂದಿನ ವಾರ ಮಾತುಕತೆ ನಡೆಯಲಿದೆ. ಆದರೆ ಪ್ರತ್ಯೇಕತಾವಾದಿಗಳಾದ ಯಾಸಿನ್ ಮಲಿಕ್, ಅಯ್ಯದ್ ಅಲಿ ಷಾ ಗಿಲಾನಿ ಮತ್ತು ಮಿರ್ವೈಝ್ ಉಮರ್ ಫಾರೂಖ್ ಅವರನ್ನು ಭಾನುವಾರ ಮಾತುಕತೆಗೆ ಪಾಕಿಸ್ಥಾನ ರಾಯಭಾರ ಕಛೇರಿ ಆಹ್ವಾನಿಸಿತ್ತು.
ಈ ಹಿನ್ನಲೆಯಲ್ಲಿ ಈ ಮೂವರು ಪ್ರತ್ಯೇಕತಾವಾದಿಗಳನ್ನು ಕಾಶ್ಮೀರ ಸರ್ಕಾರ ಗೃಹಬಂಧನದಲ್ಲಿಟ್ಟಿತ್ತು. ಆದರೀಗ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.