ನವದೆಹಲಿ: ಪ್ರತಿವರ್ಷ ಜುಲೈ 1 ರಂದು ಚಾರ್ಟೆಡ್ ಅಕೌಂಟೆಂಟ್ಸ್ ದಿನ ಅಥವಾ ಸಿಎ ದಿನವನ್ನು ಆಚರಿಸಲಾಗುತ್ತದೆ. 1949 ರಲ್ಲಿ ಭಾರತದ ಸಂಸತ್ತು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)ವನ್ನು ಸ್ಥಾಪಿಸಿದ ನೆನಪಿಗಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಐಸಿಎಐ ಭಾರತದ ರಾಷ್ಟ್ರೀಯ ವೃತ್ತಿಪರ ಲೆಕ್ಕಪತ್ರ ಸಂಸ್ಥೆ ಮತ್ತು ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಲೆಕ್ಕಪತ್ರ ಸಂಸ್ಥೆಯಾಗಿದೆ .
ಸಿಎ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಚಾರ್ಟರ್ಡ್ ಅಕೌಂಟೆಂಟ್ಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟ್ ಮಾಡಿರುವ ಅವರು, “ಸಿಎ ದಿನದಂದು ಎಲ್ಲಾ ಚಾರ್ಟರ್ಡ್ ಅಕೌಂಟೆಂಟ್ಗಳಿಗೆ ಶುಭಾಶಯಗಳು. ಭಾರತದ ಪ್ರಗತಿಯಲ್ಲಿ ಈ ಸಮುದಾಯವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಭಾರತೀಯ ಸಂಸ್ಥೆಗಳು ಜಾಗತಿಕವಾಗಿ ಅತ್ಯುತ್ತಮವಾದವುಗಳಾಗಿ ಹೊರಹೊಮ್ಮಲು ಸಾಧ್ಯವಾಗುವಂತೆ ಉತ್ಕೃಷ್ಟತೆಯತ್ತ ಗಮನ ಹರಿಸಬೇಕೆಂದು ನಾನು ಎಲ್ಲಾ ಸಿಎಗಳಿಗೆ ಕರೆ ನೀಡುತ್ತೇನೆ” ಎಂದಿದ್ದಾರೆ.
Greetings to all Chartered Accountants on CA Day. This community has a vital role in India’s progress. I call upon all CAs to keep the focus on excellence so that Indian firms emerge as one of the best globally.
— Narendra Modi (@narendramodi) July 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.