ನವದೆಹಲಿ: ಯುರೋಪಿಯನ್ ಯೂನಿಯನ್ ತನ್ನ ‘ವ್ಯಾಕ್ಸಿನೇಷನ್ ಪಾಸ್ ಪೋರ್ಟ್’ ನಲ್ಲಿ ಭಾರತೀಯ ನಿರ್ಮಿತ ಲಸಿಕೆಗಳನ್ನು ಒಳಪಡಿಸಲು ಹಿಂಜರಿಯುತ್ತಿರುವುದು ಭಾರತದ ಕೆಂಗಣ್ಣಿಗೆ ಕಾರಣವಾಗಿದೆ. ಒಂದು ವೇಳೆ ಭಾರತ ನಿರ್ಮಿತ ಲಸಿಕೆಯನ್ನು ಯುರೋಪಿಯನ್ ಯೂನಿಯನ್ ಸ್ವೀಕರಿಸಲು ಮುಂದಾಗದಿದ್ದರೆ ಭಾರತವು ಕಠಿಣ ನೀತಿ ಅನುಸರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಯುರೋಪಿಯನ್ ಒಕ್ಕೂಟವು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಪ್ರಮಾಣಪತ್ರಗಳನ್ನು ಸ್ವೀಕರಿಸದ ಹೊರತು, ಅವರ ಪ್ರಮಾಣಪತ್ರಗಳನ್ನು ಭಾರತದಲ್ಲಿ ಸ್ವೀಕರಿಸಲಾಗುವುದಿಲ್ಲ ಮತ್ತು ಭಾರತಕ್ಕೆ ಬಂದ ನಂತರ ಇಯು ಜನರು ಕಡ್ಡಾಯವಾಗಿ ಕ್ವಾರಂಟೈನ್ ಎದುರಿಸಬೇಕಾಗುತ್ತದೆ ಎಂದು ಭಾರತ ಹೇಳಿದೆ.
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಅನ್ನು ಅದರ ಡಿಜಿಟಲ್ ಕೋವಿಡ್ ಪ್ರಮಾಣಪತ್ರದಲ್ಲಿ ಉಲ್ಲೇಖಿಸಬೇಕು ಎಂದು ಯುರೋಪಿಯನ್ ಯೂನಿಯನ್ಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ “ಗ್ರೀನ್ ಪಾಸ್” ಯೋಜನೆಯಡಿಯಲ್ಲಿ, ಕೋವಿಶೀಲ್ಡ್ ಲಸಿಕೆ ಹಾಕಿದ ಜನರಿಗೆ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸಲು ಅವಕಾಶವಿಲ್ಲ. ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಅನುಮೋದಿಸಿದ ಲಸಿಕೆಗಳನ್ನು ಮಾತ್ರ ಇಯು ದೇಶಗಳು ಸ್ವೀಕರಿಸುತ್ತವೆ, ಅವುಗಳೆಂದರೆ ಫಿಜರ್, ಮೊಡೆರ್ನಾ, ಅಸ್ಟ್ರಾಜೆನೆಕಾ ಮತ್ತು ಜಾನ್ಸೆನ್. ಅಸ್ಟ್ರಾಜೆನೆಕಾದ ಭಾರತೀಯ ಆವೃತ್ತಿಯಾದ ಕೋವಿಶೀಲ್ಡ್ ಕೂಡ ಇನ್ನೂ ಅವರ ಅನುಮತಿ ಪಡೆದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.