ವಾಷಿಂಗ್ಟನ್: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಭಾರತದ ದೇಶೀಯ ಕೋವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ನ ಆಲ್ಫಾ ಮತ್ತು ಡೆಲ್ಟಾ ಎರಡೂ ರೂಪಾಂತರಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ.
ಕೊವ್ಯಾಕ್ಸಿನ್ ಪಡೆದ ಜನರ ರಕ್ತದ ಸೀರಮ್ ಮೇಲೆ ನಡೆಸಲಾದ ಎರಡು ಅಧ್ಯಯನಗಳ ಫಲಿತಾಂಶಗಳು ಲಸಿಕೆ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಂಸ್ಥೆ ಹೇಳಿದೆ.
ಕೊವ್ಯಾಕ್ಸಿನ್ ಲಸಿಕೆಯು SARS-CoV -2 ರ B .1.1.7 (ಆಲ್ಫಾ) ಮತ್ತು B .1.617 (ಡೆಲ್ಟಾ) ರೂಪಾಂತರಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ. ಈ ರೂಪಾಂತರ ಯುಕೆ ಮತ್ತು ಭಾರತದಲ್ಲಿ ಪತ್ತೆಯಾಗಿದೆ.
ಭಾರತದೊಂದಿಗಿನ ಬಲವಾದ ವೈಜ್ಞಾನಿಕ ಸಹಯೋಗದ ಇತಿಹಾಸವನ್ನು ಹೊಂದಿರುವ ಅಮೆರಿಕದ ಉನ್ನತ ಆರೋಗ್ಯ ಸಂಶೋಧನಾ ಸಂಸ್ಥೆಯ ಪ್ರಕಾರ, ಅದರ ಧನಸಹಾಯ ಕೂಡ ಕೊವ್ಯಾಕ್ಸಿನ್ನ ಯಶಸ್ಸಿಗೆ ಕಾರಣವಾಗಿದೆ. ಈ ಲಸಿಕೆಯನ್ನು ಇಲ್ಲಿಯವರೆಗೆ ಸುಮಾರು 25 ಮಿಲಿಯನ್ ಜನರಿಗೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.