ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ ಸೋಂಕು ಪತ್ತೆ ಹಚ್ಚುವಿಕೆಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿದೆ.
ಈ ಸೋಂಕಿನ ಪತ್ತೆಗೆ ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್ಗಳ ಸಂಯೋಜನೆ ಅಗತ್ಯವಾಗಿದ್ದು, ಇದಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಅಸ್ತಿತ್ವದಲ್ಲಿರುವ ದರ 25 ಸಾವಿರ, 28 ಸಾವಿರ ರೂ. ಗಳಾಗಿವೆ. ಹಾಗೆಯೇ 12 ಸಾವಿರ ರೂ. ಗಳನ್ನು ನಿಗದಿ ಮಾಡಲಾಗಿದೆ. ಆದರೆ ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಗಳು, ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಏಕರೂಪದ ದರ ನಿಗದಿ ಮಾಡುವಂತೆ ಕೋರಿದ್ದಾರೆ.
ಇದರನ್ವಯ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಉಚಿತವಾಗಿ ಮತ್ತು ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಲ್ಲಿ ರೋಗ ಪತ್ತೆಗೆ ಚಿಕಿತ್ಸಾ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಎಂಆರ್ಐ ಬ್ರೈನ್ ಸ್ಕ್ಯಾನ್ಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 3000, ಎಪಿಎಲ್ ಕಾರ್ಡ್ ಹೊಂದಿದವರಿಗೆ 4000 ರೂ. ನಿಗದಿ ಮಾಡಲಾಗಿದೆ. ಎಂಆರ್ಐ ಪಿಎನ್ಎಸ್ಗೆ 3000(ಬಿಪಿಎಲ್), 4000 (ಎಪಿಎಲ್), ಎಂಆರ್ಐ ಆಫ್ ಆರ್ಬಿಟ್ಸ್ಗೆ 3000(ಬಿಪಿಎಲ್), 4000(ಎಪಿಎಲ್) ಗೆ ನಿಗದಿ ಮಾಡಲಾಗಿದೆ. ಈ ಮೂರೂ ಸ್ಕ್ಯಾನಿಂಗ್ಗೆ ಒಟ್ಟಾಗಿ 7500(ಬಿಪಿಎಲ್) ಮತ್ತು 10000 (ಎಪಿಎಲ್) ಗೆ ನಿಗದಿ ಮಾಡಲಾಗಿದೆ. ಹಾಗೆಯೇ ಎಂಆರ್ಐ ಆಫ್ ಕಾನ್ಟ್ರಾಸ್ಟ್ ಸ್ಕ್ಯಾನ್ಗೆ 1500 ರೂ. ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ ಸೋಂಕಿತರಲ್ಲಿ, ಹೆಚ್ಚುತ್ತಿರುವ ಮ್ಯುಕೋರ್ ಮೈಕೋಸಿಸ್ (ಕಪ್ಪು, ಶಿಲಿಂಧ್ರ) ಪತ್ತೆ ಹಚ್ಚುವಿಕೆ ಪರೀಕ್ಷಾ ದರವನ್ನು ನಿಗದಿಪಡಿಸುವ ಬಗ್ಗೆ.@CMofKarnataka @mla_sudhakar @drashwathcn @GovindKarjol @laxmansavadi @siddaramaiah @hd_kumaraswamy @DKShivakumar @BSBommai @RAshokaBJP @VSOMANNA_BJP pic.twitter.com/dgeC8t6iEl
— K'taka Health Dept (@DHFWKA) June 28, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.