ನವದೆಹಲಿ: ಭಾರತಕ್ಕೆ ಹೆಮ್ಮೆಯ ಕ್ಷಣವನ್ನು ತಂದುಕೊಟ್ಟಿದ್ದಾರೆ ಅಪ್ರತಿಮ ಬಿಲ್ಲುಗಾರ್ತಿ ದೀಪಿಕಾ ಕುಮಾರಿ. ಭಾನುವಾರ ನಡೆದ ಆರ್ಚರಿ ವರ್ಲ್ಡ್ಕಪ್ನ 3 ನೇ ಹಂತದಲ್ಲಿ ಅವರು ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.
ಪ್ಯಾರಿಸ್ನಲ್ಲಿ ನಡೆದ ಆರ್ಚರಿ ವಿಶ್ವಕಪ್ನ ಮೂರನೇ ಹಂತದಲ್ಲಿ ಭಾರತವು ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಇದು ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯರ ಪದಕದ ಕನಸನ್ನು ಗರಿಗೆದರುವಂತೆ ಮಾಡಿದೆ.
ವಿಶ್ವದ ನಂ.3 ಬಿಲ್ಲುಗಾರ್ತಿ ಎನಿಸಿರುವ ದೀಪಿಕಾ ಕುಮಾರಿ ರಷ್ಯಾದ ಎಲೆನಾ ಒಸಿಪೋವಾ ಅವರನ್ನು ನೇರ ಸೆಟ್ಗಳಲ್ಲಿ ಸೋಲಿಸಿ ಮೂರನೇ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು. ಅದಕ್ಕೂ ಮೊದಲು ಅವರು ಮಹಿಳೆಯರ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಬಂಗಾರದ ಪದಕವನ್ನು ಜಯಸಿದ್ದಾರೆ.
ವಿಶೇಷವೆಂದರೆ, ಟೋಕಿಯೋ ಒಲಿಂಪಿಕ್ಸ್ನಲ್ಲಿ ದೀಪಿಕಾ ಕುಮಾರಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಮಹಿಳಾ ಬಿಲ್ಲುಗಾರ್ತಿಯಾಗಿದ್ದಾರೆ.
Deepika Kumari 🇮🇳 takes gold in Paris! 🥇🏹👏 #ArcheryWorldCup pic.twitter.com/0ZIxSceCFs
— World Archery (@worldarchery) June 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.