ಬೆಂಗಳೂರು: 60 ವರ್ಷಕ್ಕೂ ಅಧಿಕ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಜ್ವಲಂತ ಸಮಸ್ಯೆಗಳನ್ನು ಜೀವಂತವಾಗಿರಿಸಲು ಪ್ರಯತ್ನ ನಡೆಸಿತೇ ವಿನಃ ಅವುಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ ಎಂದು ಡಿಸಿಎಂ ಡಾ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಬಳ್ಳಾರಿ ಘಟಕದ ವತಿಯಿಂದ ನಡೆದ ಇ-ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮೋದಿ ಸರ್ಕಾರದ 7 ವರ್ಷಗಳ ಸಾಧನೆಯ ಬಗ್ಗೆ ವರ್ಚುವಲ್ ಮುಖೇಶ ಮಾತನಾಡಿದ ಅವರು, ಕಾಂಗ್ರೆಸ್ ಓಟ್ಬ್ಯಾಂಕ್ಗಾಗಿ ಸಮಸ್ಯೆಗಳನ್ನು ನಿರಂತರವಾಗಿ ಜೀವಂತವಿರುವಂತೆ ನೋಡಿಕೊಂಡಿತು. ಪ್ರಸ್ತುತ ಪ್ರಧಾನಿ ಮೋದಿ ಸರ್ಕಾರ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾ ಆಡಳಿತ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿಯದ್ದು ಒಂದು ಭಾರತ – ಒಂದೇ ದೇಶ ಎಂಬ ನೀತಿಯಾದರೆ, ಕಾಂಗ್ರೆಸ್ನದ್ದು ಒಂದು ಭಾರತ – ಎರಡು ದೇಶ ಎಂಬ ನೀತಿ. ಇದರಿಂದಲೇ ಕಾಶ್ಮೀರ ಭಾರತದೊಳಗೇ ಇದ್ದು, ಬೇರೆಯಾಗಿತ್ತು. ಇದನ್ನು ಬಿಜೆಪಿ ಸರಿಪಡಿಸಿದೆ. ರಾಮಮಂದಿರ, ಕಾಶ್ಮೀರ, ವಲಸಿಗರ ಸ್ಥಿತಿ, ಉದ್ಯೋಗ, ಕೈಗಾರಿಕೆ ಸೇರಿದಂತೆ ಎಲ್ಲಾ ವಿಚಾರದಲ್ಲೂ ಸಮಸ್ಯೆಗಳಿದ್ದವು. ಇವೆಲ್ಲಕ್ಕೂ ಬಿಜೆಪಿ ಪರಿಹಾರ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ವಿಶ್ವಕ್ಕೆ ಭಾರತದ ಶಕ್ತಿಯ ಅರಿವನ್ನು ಪ್ರಧಾನಿ ಮೋದಿ ಅವರು ಮಾಡಿಕೊಟ್ಟಿದ್ದಾರೆ. ಜಗತ್ತಿಗೆ ಎಲ್ಲವೂ ಅರಿವಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಆತ್ಮನಿರ್ಭರದ ಮೂಲಕ ಭಾರತವನ್ನು ಸಶಕ್ತವಾಗಿಸಿದ ಕೀರ್ತಿ ಮೋದಿ ಸರ್ಕಾರದ್ದು. ಲಸಿಕೆ ಉತ್ಪಾದನೆಯಲ್ಲಿಯೂ ವಿಶ್ವಕ್ಕೆ ಅಗ್ರಮಾನ್ಯ ದೇಶವಾಗಿ ಭಾರತ ಹೊರಹೊಮ್ಮಿತು. ಇದು ಭಾರತದ ಸಾಧನೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.