ನವದೆಹಲಿ: ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಕ್ಕೆ ವ್ಯವಸ್ಥೆ ರೂಪಿಸಿರುವ ಮಾದರಿಯಲ್ಲೇ ಎರಡರಿಂದ ಮೂರು ವಾರಗಳಿಗೆ ಬೇಕಾಗುವಷ್ಟು ಅಗತ್ಯವಿರುವ ಪ್ರಮಾಣದಲ್ಲಿ ಆಕ್ಸಿಜನ್ ಸಂಗ್ರಹಿಸಿಡುವ ವ್ಯವಸ್ಥೆ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ರಾಷ್ಟ್ರೀಯ ಕಾರ್ಯಪಡೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಕೊರೋನಾ ಸಂಕಷ್ಟದಿಂದ ಜನರನ್ನು ಉಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಮ್ಲಜನಕ ವಿತರಣೆಯ ವಿಧಾನವನ್ನು ರೂಪಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವೈದ್ಯಕೀಯ ಕ್ಷೇತ್ರದ ತಜ್ಞರನ್ನು ಒಳಗೊಂಡಂತೆ ಎನ್ಟಿಎಫ್ ಅನ್ನು ಈ ಹಿಂದೆಯೇ ರೂಪಿಸಿತ್ತು. ಇದು ಎಲ್ಲಾ ಆಸ್ಪತ್ರೆಗಳು ತುರ್ತು ಪರಿಸ್ಥಿತಿಯ ಬಳಕೆಗೆ ಬಫರ್ ಸಾಮರ್ಥ್ಯ ಹೊಂದಿರಬೇಕು, ಜೊತೆಗೆ ಹಿರಿಯ ಸಿಬ್ಬಂದಿಗಳನ್ನು ಒಳಗೊಂಡ ಆಮ್ಲಜನಕ ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಹೇಳಿದೆ.
ಅವಶ್ಯಕತೆಯ ಆಧಾರದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಬೇಕು ಎಂದು ಹೇಳಿದೆ. ಅದರೊಂದಿಗೆ ಕೊರೋನಾ ಮೂರನೇ ಅಲೆಯನ್ನು ಎದುರಿಸಲು ಎಲ್ಎಂಒ ಉತ್ಪಾದನೆಯನ್ನು ಹೆಚ್ಚಿಸುವಂತೆಯೂ ಅದು ತಿಳಿಸಿದೆ. ಉತ್ಪಾದನಾ ಕೈಗಾರಿಕೆಗಳಿಗೆ ಸರ್ಕಾರ ಬೆಂಬಲ, ಸಬ್ಸಿಡಿ ಒದಗಿಸುವಂತೆಯೂ ಕೋರ್ಟ್ ತಿಳಿಸಿದೆ.
ಹಾಗೆಯೇ ತುರ್ತು ಅಗತ್ಯತೆಗೆ ಆಕ್ಸಿಜನ್ ಘಟಕಗಳ ಸಮೀಪ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು. ಸಿಲಿಂಡರ್ಗಳ ಮೇಲೆ ಗಮನ ಹರಿಸುವಂತೆಯೂ ಸೂಚಿಸಿದೆ. ಆಕ್ಸಿಜನ್ ಸಂಬಂಧ 163 ಪುಟಗಳ ವರದಿ ಸಲ್ಲಿಸಿರುವ ಕಾರ್ಯಪಡೆ ಆಸ್ಪತ್ರೆ, ರಾಜ್ಯಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಿದೆ. ರೋಗಿಗಳಿಗೆ ಪ್ರೋನ್ ವಿಧಾನದ ಅರಿವು ಮೂಡಿಸುವಂತೆಯೂ ಸೂಚಿಸಿದೆ. ಜೊತೆಗೆ ಉತ್ಪಾದನಾ ಘಟಕದಿಂದ 24 ಗಂಟೆಗಳೊಳಗಾಗಿ ಆಕ್ಸಿಜನ್ ಸಂಗ್ರಹ ಘಟಕಕ್ಕೆ ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.