ಬೆಂಗಳೂರು: ಕಳೆದ 46 ವರ್ಷದ ಹಿಂದೆ ಯಾವುದೇ ಕಾರಣಗಳಿಲ್ಲದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಜನರನ್ನು ಕಷ್ಟಕ್ಕೀಡು ಮಾಡಿದ್ದರು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಆ ಸಂದರ್ಭದಲ್ಲಿ ತಮ್ಮ ಪಟ್ಟವನ್ನು ಉಳಿಸಿಕೊಳ್ಳಲು ಇಂದಿರಾ ಗಾಂಧಿ ಅವರು ತೆಗೆದುಕೊಂಡ ಒಂದು ನಿರ್ಧಾರ ದೇಶದ ಅನೇಕ ಜನರನ್ನು ಜೈಲು ಸೇರುವಂತೆ ಮಾಡಿತು. ಸಂವಿಧಾನದತ್ತವಾದ ಸ್ವಾತಂತ್ರ್ಯಗಳನ್ನು ಕಸಿದುಕೊಳ್ಳಲಾಯಿತು. ಅಮಾಯಕರ ಬಂಧನವಾಯಿತು. ನಾಗರಿಕ ಹಕ್ಕುಗಳಿಗೂ ಬೆಲೆ ಇಲ್ಲದಂತಾಗಿತ್ತು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರ್ಎಸ್ಎಸ್ನ ಸ್ವಯಂಸೇವಕರು ತಮ್ಮ ಮನೆ ಮಠಗಳನ್ನು ತೊರೆದು, ಮನೆಮನೆಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೆವು. ನನ್ನನ್ನೊಳಗೊಂಡಂತೆ ಅನೇಕ ಜನರು ಸೆರೆವಾಸ ಅನುಭವಿಸುವಂತಾಗಿತ್ತು. ಇಡೀ ರಾಷ್ಟ್ರ ಸಂಕಷ್ಟ ಅನುಭವಿಸಿತ್ತು ಎಂದು ಯಡಿಯೂರಪ್ಪ ಅಂದಿನ ತುರ್ತು ಪರಿಸ್ಥಿತಿಯ ಕರಾಳತೆ ಬಗ್ಗೆ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.