News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಮಾಚಲ: ರೂ 6,155 ಕೋಟಿ ವೆಚ್ಚದ 222 ಕಿಮೀ ಉದ್ದದ 9 ರಸ್ತೆ ಕಾರಿಡಾರ್‌ ಉದ್ಘಾಟನೆ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹಿಮಾಚಲ ಪ್ರದೇಶದಲ್ಲಿ 222 ಕಿಲೋಮೀಟರ್ ಉದ್ದದ ಒಂಬತ್ತು ರಸ್ತೆ ಕಾರಿಡಾರ್‌ಗಳನ್ನು ಉದ್ಘಾಟಿಸಿದರು. 6,155 ಕೋಟಿ ರೂಪಾಯಿ ಟ್ಟು ವೆಚ್ಚದಲ್ಲಿ ಇದರ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ರಸ್ತೆ ಯೋಜನೆಗಳು ಹಿಮಾಚಲ ಪ್ರದೇಶದ ಜನರಿಗೆ ಸಮೃದ್ಧಿಯನ್ನು ಖಚಿತಪಡಿಸುತ್ತದೆ ಎಂದು ಕಾರ್ಯಕ್ರಮವನ್ನುದ್ದೇಶಿಸಿ ಗಡ್ಕರಿ ಹೇಳಿದರು.

ದೆಹಲಿಯಿಂದ ಕುಲ್ಲುಗೆ ರಸ್ತೆ ಪ್ರಯಾಣದ ಸಮಯ ಇನ್ನು ಎರಡು ವರ್ಷಗಳಲ್ಲಿ ಕೇವಲ ಏಳು ಗಂಟೆಗೆ ಇಳಿಯಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಇನ್ನೂ 11 ಸುರಂಗಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಶೀಘ್ರದಲ್ಲೇ ನಡೆಸಲಾಗುವುದು. ಮನಾಲಿ – ಲೇಹ್ ಸುರಂಗ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ದೇಶಾದ್ಯಂತ ಈ ವರ್ಷ ಸುಮಾರು 15 ಲಕ್ಷ ಕೋಟಿ ರೂ.ಗಳ ರಸ್ತೆ ನಿರ್ಮಾಣ ಕಾರ್ಯಗಳನ್ನು ಯೋಜಿಸಲಾಗಿದೆ. ಭೂಸ್ವಾಧೀನ ಮತ್ತು ಪರಿಸರ ಅನುಮತಿಗೆ ಸಂಬಂಧಿಸಿದ ಪ್ರಕ್ರಿಯೆಯು ತ್ವರಿತಗೊಂಡಿದ್ದುಮ ಸಮಯಕ್ಕೆ ಸರಿಯಾಗಿ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ”ಎಂದು ನಿತಿನ್ ಗಡ್ಕರಿ ಹೇಳಿದರು.

ಹಿಮಾಚಲ ಪ್ರದೇಶದಲ್ಲಿ 491 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು 2021-22ರಲ್ಲಿ ಒಟ್ಟು 15 ಸಾವಿರ ಕೋಟಿ ರೂ.ವೆಚ್ಚದಲ್ಲಿ ನಡೆಸಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ರೋಪ್‌ವೇ ನೆಟ್‌ವರ್ಕ್ ಮತ್ತು ಕೇಬಲ್ ಕಾರ್  ಸಾಧ್ಯತೆಯನ್ನು ಸರ್ಕಾರ ಪರಿಶೋಧಿಸುತ್ತದೆ ಎಂದು ಸಚಿವರು ಹೇಳಿದರು.

ಇತ್ತೀಚೆಗೆ, ನಿತಿನ್ ಗಡ್ಕರಿ ಅವರು ಐದು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ಹೆದ್ದಾರಿಗಳು ಮತ್ತು 17 ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ  ಬಿಡ್ಡಿಂಗ್ ಮತ್ತು ನಿರ್ಮಾಣ ಪೂರ್ವ ನಿರ್ಮಾಣ ಚಟುವಟಿಕೆಗಳನ್ನು ಭಾರತ್‌ ಮಾಲಾ ಪರಿಯೋಜನಾ ಹಂತ -1 ರ ಅಡಿಯಲ್ಲಿ ಕಾರ್ಯಗತಗೊಳಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top