ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, 2 ವರ್ಷ 8 ತಿಂಗಳ ಬಾಲಕಿ ಸೇರಿದಂತೆ ಐದು ಮಕ್ಕಳಿಗೆ ಕಾನ್ಪುರ್ ದೇಹತ್ನಲ್ಲಿ ಕೋವಿಡ್ ಲಸಿಕೆಯನ್ನು ಪ್ರಯೋಗಿಕವಾಗಿ ನೀಡಲಾಗಿದೆ.
ಎರಡು ವರ್ಷ ಎಂಟು ತಿಂಗಳ ಬಾಲಕಿ ಕಾನ್ಪುರ್ ದೇಹತ್ನಲ್ಲಿನ ವೈದ್ಯರ ಮಗಳು ಎಂದು ಮೂಲಗಳು ತಿಳಿಸಿವೆ.
ಮಕ್ಕಳ ಮೇಲೆ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಪ್ರಯೋಗ ವಿವಿಧೆಡೆ ವೇಗದಲ್ಲಿ ನಡೆಯುತ್ತಿದೆ.
ಮಕ್ಕಳಿಗೆ ಲಸಿಕೆ ಹಾಕಿದ ಪ್ರಖರ್ ಆಸ್ಪತ್ರೆಯ ವಕ್ತಾರರ ಪ್ರಕಾರ, ಗುರುವಾರ 2-6 ವರ್ಷದೊಳಗಿನ ಮೂವರು ಬಾಲಕಿಯರು ಮತ್ತು ಇಬ್ಬರು ಬಾಲಕರು ಸೇರಿದಂತೆ ಸುಮಾರು ಐದು ಮಕ್ಕಳಿಗೆ ಕಾನ್ಪುರದ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗಿದೆ ಎಂದು ಹೇಳಿದರು.
ಮಕ್ಕಳನ್ನು ಮನೆಗೆ ಹೋಗಲು ಅನುಮತಿಸುವ ಮೊದಲು ಎರಡು ಗಂಟೆಗಳ ನಿಗಾದಲ್ಲಿ ಇರಿಸಲಾಗಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.
ಲಸಿಕೆ ಹಾಕಿದ ಮಕ್ಕಳ ಸುರಕ್ಷತಾ ವಿವರವನ್ನು ಸಿದ್ಧಪಡಿಸಲಾಗುತ್ತದೆ.
ಮೇ ತಿಂಗಳಲ್ಲಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಭಾರತ್ ಬಯೋಟೆಕ್ಗೆ ಕೋವ್ಯಾಕ್ಸಿನ್ನ 2-3 ನೇ ಹಂತದ ಪ್ರಯೋಗಗಳನ್ನು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪ್ರಾರಂಭಿಸಲು ಅನುಮತಿ ನೀಡಿತ್ತು.
ಏಮ್ಸ್ ದೆಹಲಿ ಮತ್ತು ಪಾಟ್ನಾ ಸೇರಿದಂತೆ ಹಲವಾರು ಆಸ್ಪತ್ರೆಗಳು ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗವನ್ನು ಪ್ರಾರಂಭಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.