ಬೆಂಗಳೂರು: ರಾಜ್ಯದಲ್ಲಿರುವ ಅಸ್ತಿತ್ವ ಕಳೆದುಕೊಂಡ ಕೆರೆ, ಕುಂಟೆ, ತೊರೆ, ರಾಜಕಾಲುವೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದು, ಅವುಗಳನ್ನು ಇತರೇ ಉದ್ದೇಶಕ್ಕೆ ಬಳಕೆ ಮಾಡುವುದಕ್ಕೆ ತಡೆ ನೀಡುವ ಕಾಯ್ದೆಗೆ ತಿದ್ದುಪಡಿ ಮಾಡಿದೆ.
ಜಲಮೂಲಗಳು ಅಸ್ತಿತ್ವ ಕಳೆದುಕೊಂಡರೂ, ಅವುಗಳನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆ ಈ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. 2015 ರಲ್ಲಿ ಅಂದಿನ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಕೆರೆ, ಕುಂಟೆ,ತೊರೆ, ರಾಜಕಾಲುವೆಗಳು ಸ್ವರೂಪ ಕಳೆದುಕೊಂಡಿದ್ದರೆ, ಅವುಗಳನ್ನು ಅನ್ಯ ಉದ್ದೇಶಕ್ಕಾಗಿ ಬಳಕೆ ಮಾಡಲು ಅವಕಾಶ ನೀಡಿತ್ತು. ಆದರೆ ಪ್ರಸ್ತುತ ಅದಕ್ಕೆ ತಡೆ ನೀಡುವ ಮೂಲಕ ಜಲಮೂಲಗಳನ್ನು ಉಳಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಒಂದು ವೇಳೆ ಖಾಸಗಿ ಜಮೀನಿನಲ್ಲಿರುವ ಹಳ್ಳ, ತೊರೆಗಳು ಅಸ್ತಿತ್ವ ಕಳೆದುಕೊಂಡು 10 ವರ್ಷ ಮೇಲಾಗಿದ್ದರೆ, ಅವುಗಳ ಸಮೀಕ್ಷೆ ನಡೆಸಿ ಬಳಕೆಗೆ ಅವಕಾಶ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ರಸ್ತೆಗಳು ಜಮೀನಿನಲ್ಲಿದ್ದು ಅಸ್ತಿತ್ವ ಕಳಕೊಂಡಿದ್ದರೆ, ಅವುಗಳನ್ನು ಬಳಕೆ ಮಾಡಬಹುದು. ಆದರೆ ಕೆರೆ, ಕುಂಟೆ, ರಾಜಕಾಲುವೆಗಳನ್ನು ಮುಟ್ಟುವಂತೆ ಇಲ್ಲ ಎಂದು ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.